ADVERTISEMENT

ಉದ್ಯಮಿ ಮನೆಯಿಂದ ₹30 ಲಕ್ಷ ದೋಚಿದ್ದ ಸರ್ಕಾರಿ ಶಾಲೆ ಶಿಕ್ಷಕ ಬಂಧನ!

ಉದ್ಯಮಿಯ ಮನೆಯಲ್ಲಿ ₹30 ಲಕ್ಷ ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 15:06 IST
Last Updated 20 ಜೂನ್ 2021, 15:06 IST
ಕೊಟ್ಟೂರಿನ ಉದ್ಯಮಿಯ ಮನೆಯನ್ನು ನಡೆದಿದ್ದ ಕಳವು ಪ್ರಕರಣ ಸಂಬಂಧ ಭಾನುವಾರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ಕೊಟ್ಟೂರಿನ ಉದ್ಯಮಿಯ ಮನೆಯನ್ನು ನಡೆದಿದ್ದ ಕಳವು ಪ್ರಕರಣ ಸಂಬಂಧ ಭಾನುವಾರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ   

ಕೊಟ್ಟೂರು: ಇಲ್ಲಿನ ಬಸವೇಶ್ವರ ಬಡಾವಣೆಯ ಉದ್ಯಮಿ ಮಲ್ಲೇಶಪ್ಪ ಅವರ ಮನೆಯಲ್ಲಿನ ₹30 ಲಕ್ಷ ನಗದು ಕಳವು ಪ್ರಕರಣ ಸಂಬಂಧ ಸರ್ಕಾರಿ ಶಾಲೆಯ ಶಿಕ್ಷಕ ಸೇರಿದಂತೆ ಐವರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ತಾಲ್ಲೂಕಿನ ಕಾವಲಗುಂದಿ ಗ್ರಾಮದ ಜಿ.ಎಸ್.ಜೀವನ್, ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಪಿ.ಶ್ರೀನಿವಾಸ, ತಾಲ್ಲೂಕಿನ ಚಪ್ಪರದಹಳ್ಳಿಯ ನಿವಾಸಿ ಹಾಗೂ ಕೂಡ್ಲಿಗಿ ಸೊಲ್ಲಮ್ಮ ಸರ್ಕಾರ ಶಾಲೆ ಶಿಕ್ಷಕ ಕೆ.ಬಸವರಾಜ, ಕೊಟ್ಟೂರಿನ ಯಲ್ಲೋಜಿ ರಾವ್, ತಾಲ್ಲೂಕಿನ ರಾಂಪುರ ಗ್ರಾಮದ ಎ.ರಾಮಚಂದ್ರ ಬಂಧಿತರು.

ಇವರಿಂದ ₹12.47 ಲಕ್ಷ ನಗದು, ಇನ್ನೋವಾ, ಓಮ್ನಿ, ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್‌ಪಿ ಹಾಲಮೂರ್ತಿರಾವ್ ಮಾಹಿತಿ ನೀಡಿದ್ದಾರೆ.

ADVERTISEMENT

ಪಟ್ಟಣದ ಸೀಡ್ಸ್ ಕಂಪನಿ ಮಾಲೀಕ ಹುಲ್ಲುಮನಿ ಮಲ್ಲೇಶ ಮನೆಯಲ್ಲಿ ಏ.11ರಂದು ರಾತ್ರಿ ದರೋಡೆಕೋರರು ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ₹30 ಲಕ್ಷ ದೋಚಿದ್ದರು. ಪ್ರಕರಣದ ಬೆನ್ನುಹತ್ತಿದ್ದ ಪೊಲೀಸರು ಮೇ7ರಂದು 10 ಆರೋಪಿಗಳನ್ನು ಬಂಧಿಸಿದ್ದರು. ನಂತರ ಮತ್ತೊಬ್ಬ ಸಿಕ್ಕಿಬಿದ್ದಿದ್ದ.

ಪ್ರಮುಖ ಎಂದು ಹೇಳಲಾಗುತ್ತಿದ್ದ ಜಿ.ಎಸ್.ಜೀವನ್ ಪತ್ತೆಗಾಗಿ ನಿರಂತರ ಹುಡುಕಾಟ ನಡೆಸಿದ್ದರು. ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಥಳೀಯರೂ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬಹಿರಂಗ ಪಡಿಸಿದ್ದ.

ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಪಿಐ ಎಚ್.ದೊಡ್ಡಣ್ಣ, ಪಿಎಸ್‌ಐ ಎಚ್.ನಾಗಪ್ಪ, ಎಎಸ್‌ಐ ಗಂಗಾಧರನಾಯ್ಕ ತೊಡಗಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.