ADVERTISEMENT

ತಾಳೆ ಬೆಳೆದು ಅಧಿಕ ಲಾಭ ಗಳಿಸಿ: ತೋಟಗಾರಿಕೆ ನಿರ್ದೇಶಕ ಮಹೇಶ್ ಹಿರೇಮಠ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ್ ಹಿರೇಮಠ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:31 IST
Last Updated 15 ಜುಲೈ 2025, 7:31 IST
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿ ರೈತರಿಗೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ತಾಳೆ ಬೆಳೆ ಮಾಹಿತಿ ಕರಪತ್ರ ವಿತರಿಸಿದರು
ಕುರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿ ರೈತರಿಗೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ತಾಳೆ ಬೆಳೆ ಮಾಹಿತಿ ಕರಪತ್ರ ವಿತರಿಸಿದರು   

ಕುರುಗೋಡು: ‘ಸೂರ್ಯಕಾಂತಿ ಮತ್ತು ಶೇಂಗಾ ಬೆಳೆಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ನೀಡುವ ತಾಳೆ ಬೆಳೆ ಬೆಳೆಯಿರಿ’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ್ ಹಿರೇಮಠ ಹೇಳಿದರು.

ಸಮೀಪದ ಸಿರಿಗೇರಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಳೆ ಬೆಳೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಹೆಚ್ಚು ಬೇಡಿಕೆ ಇರುವ ತಾಳೆ ಎಣ್ಣೆಗಾಗಿ ಶೇ 80ರಷ್ಟು ವಿದೇಶಗಳನ್ನು ವಲಂಬಿಸಲಾಗಿದೆ. ತಾಳೆ ಬೆಳೆ ವಿಸ್ತೀರ್ಣ ಹೆಚ್ಚಿಸುವ ಉದ್ದೇಶದಿಂದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಾಯಧನ ನೀಡಲಿದೆ. ಸ್ವಾವಲಂಬನೆಗಾಗಿ ರೈತರು ತಾಳೆ ಬೆಳೆ ಬೆಳೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಾಳೆ ಬೆಳೆ ಪ್ರೋತ್ಸಾಹಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ರೈತರಿಗೆ ಉಚಿತವಾಗಿ ತಾಳೆ ಸಸಿ ಮತ್ತು ಗೊಬ್ಬರ ವಿತರಿಸಲಾಯಿತು. ತಾಳೆ ಬೆಳೆ ಕುರಿತು ಮಾಹಿತಿ ಇರುವ ಕರಪತ್ರ ಹಂಚಲಾಯಿತು.

ತೋಟಗಾರಿಕೆ ಅಧಿಕಾರಿ ಶಿವಲಿಂಗ ಕುಂಬಾರ, ಸಂಸ್ಥೆ ಪ್ರತಿನಿಧಿ ರಿಜ್ವಾನ್, ರೈತರಾದ ಸಿದ್ದಯ್ಯ, ನೇನಕ್ಕಿ ಹನುಮಂತ, ಕೊಳ್ಳಿ ಈರಣ್ಣ, ಹೊಳಗುಂದಿ ವೀರೇಶ್, ವಿ.ನಾಗರಾಜ, ಕುಂಬಾರ ಬಸವರಾಜ, ಮಾರೇಶ್, ನೆನಕ್ಕಿ ದೊಡ್ಡಬಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.