ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿಯುವಜನ ಇಲಾಖೆ ಜಿಮ್‌ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 15:46 IST
Last Updated 7 ಜುಲೈ 2021, 15:46 IST
ಹೊಸಪೇಟೆಯಲ್ಲಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಿಮ್‌ನಲ್ಲಿ ಯುವಕರು ಬುಧವಾರ ದೈಹಿಕ ಕಸರತ್ತು ಮಾಡಿದರು
ಹೊಸಪೇಟೆಯಲ್ಲಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಿಮ್‌ನಲ್ಲಿ ಯುವಕರು ಬುಧವಾರ ದೈಹಿಕ ಕಸರತ್ತು ಮಾಡಿದರು   

ಹೊಸಪೇಟೆ (ವಿಜಯನಗರ): ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿನ ಜಿಮ್‌ ಬುಧವಾರ ಆರಂಭಗೊಂಡಿದೆ.

‘ಯುವಜನ ಕ್ರೀಡಾ ಇಲಾಖೆಯ ಜಿಮ್‌, ಈಜುಕೊಳದಲ್ಲಿಲ್ಲ ಸಿದ್ಧತೆ’ ಶೀರ್ಷಿಕೆ ಅಡಿ ಸೋಮವಾರ (ಜು.5) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಇಲಾಖೆ ಬುಧವಾರ ಜಿಮ್‌ ಆರಂಭಿಸಿದ್ದು, ಮೊದಲ ದಿನವೇ ಅನೇಕರು ಬಂದು ದೈಹಿಕ ಕಸರತ್ತು ಮಾಡಿದ್ದಾರೆ.

‘ಬ್ಯಾಡ್ಮಿಂಟನ್‌ ಕೋಟ್‌, ಈಜುಕೊಳದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಆರಂಭಿಸಲಾಗುವುದು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.