ಹರಪನಹಳ್ಳಿ : ತಾಲ್ಲೂಕಿನ ನೀಲಗುಂದದಲ್ಲಿ ಭರ್ತಿಯಾಗಿರುವ ಕೆರೆಯ ನೀರು ರೈತರ ಜಮೀನುಗಳಿಗೆ ನುಗ್ಗಿದ ಪರಿಣಾಮ 45 ಎಕರೆ ಬೆಳೆ ಜಲಾವೃತವಾಗಿದೆ.
ಕೆರೆಯ ಕೋಡಿ ಮುಂಭಾಗ ಅಭಿವೃದ್ದಿಪಡಿಸಿರುವ ರಸ್ತೆಯಿಂದಾಗಿ ಕೆರೆ ಭರ್ತಿಯಾದಾಗ ನೀರು ರೈತರ ಹೊಲದತ್ತ ನುಗ್ಗುತ್ತಿದೆ. ಇದರಿಂದ ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗುತ್ತಿರುವ ಬಗ್ಗೆ ರೈತರು ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರೆದುರು ಅಳಲು ತೋಡಿಕೊಂಡರು.
ಕೆರೆ ನೀರು ಕೋಡಿ ಮೂಲಕ ಹೊರಗಡೆ ಹೋಗಲು ವ್ಯವಸ್ಥೆ ಕಲ್ಪಿಸಲು, ಕೂಡಲೇ ಸಮೀಕ್ಷೆ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಲತಾ ಮಲ್ಲಿಕಾರ್ಜುನ ಸೂಚಿಸಿದರು.
ತಹಶೀಲ್ದಾರ್ ಶ್ರೀ ಬಿ.ವಿ ಗಿರೀಶ್ ಬಾಬು, ಸಿಪಿಐ ಮಹಾಂತೇಶ್ ಜಿ ಸಜ್ಜನ್, ಪಿಎಸ್ಐ ಶಂಭುಲಿಂಗ ಸಿ. ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಕೆ.ಕುಬೇರಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.