ಬಳ್ಳಾರಿ: ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯ ದುರಂತದಲ್ಲಿ ಮೃತಪಟ್ಟ ಬಳ್ಳಾರಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ತಾನೇ ದುಡಿದು ವಿದ್ಯಾಭ್ಯಾಸ ಕೈಗೊಂಡಿದ್ದ. ರಜೆ ಸಿಕ್ಕಾಗ, ಸಮಯವಾದಾಗ ಕೇಟರಿಂಗ್‌ಗಳಲ್ಲಿ ಕೆಲಸ ಮಾಡುತ್ತಿದ್ದ.
ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಓದುತ್ತಿದ್ದ ಪ್ರವೀಣ್ ಕುಮಾರ್ ಇಂಟರ್ನ್‌ಶಿಪ್‌ಗೆ ಹೋಗಬೇಕಿತ್ತು. ಕೆಲಸಕ್ಕೆ ಸೇರುವ ಕನಸು ಕಂಡಿದ್ದ ಎಂದು ಆತನ ಸ್ನೇಹಿತರು ಸ್ಮರಿಸಿದರು. ಮೃತನ ತಾಯಿ ಸುಶೀಲಮ್ಮ ಮನೆಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಪ್ರವೀಣ್ ಮೃತದೇಹ ಬಳ್ಳಾರಿಯ ನಾಗಲಕೆರೆಯ ಮನೆ ಬಳಿಗೆ ಶನಿವಾರ ಮುಂಜಾನೆ ತಲುಪಿತು. ತಾಯಿ, ಅಕ್ಕ, ಸಂಬಂಧಿಗಳು, ಸುತ್ತಲ ಪ್ರದೇಶದವರು ಶೋಕ ಸಾಗರದಲ್ಲಿ ಮುಳುಗಿದ್ದರು. ಬಳ್ಳಾರಿ ನಗರದ ಕೌಲ್ ಬಜಾರ್‌ನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ನೆರವೇರಿಸಲಾಯಿತು. ಮಾಜಿ ಸಚಿವ ಶ್ರೀರಾಮುಲು, ಮೇಯರ್ ಮುಲ್ಲಂಗಿ ನಂದೀಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.