
ತೆಕ್ಕಲಕೋಟೆ: ಸಮೀಪದ ಹಳೇಕೋಟೆ ಗ್ರಾಮದ ಹಜರತ್ ಸೈಯ್ಯದ್ ಷಾಹ ಖಾಸೀಂವಲಿ ಇವರ 429ನೇ ಉರುಸ್ ಹಜರತ್ ಸೈಯ್ಯದ್ ಷಾ ಮುರುಷದ್ ಪೀರ್‌ಖಾದ್ರಿ ಕಣೇಕಲ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಭಾನುವಾರ ಸಂಜೆ ಗಂಧದ ಮೆರವಣಿಗೆಯು ಸಿರುಗುಪ್ಪ ರಾಂಡೋಲ್ ತಂಡದ ಬಾಜಾ ಭಜಂತ್ರಿ ಮೊದಲಾದ ವಾದ್ಯ ವೈಭವದಿಂದ ಪಟ್ಟಣದ ಮುಜಾವರ್ ಖಾಸಿಂಸಾಬ್ ಇವರ ಮನೆಯಿಂದ ಗುರುಗಳಾದ ಸೈಯದ್ ಚಾಂದ್ ಪೀರ್ ಖಾದ್ರಿ ತೆಕ್ಕಲಕೋಟೆ ಗದ್ದಿ ನಹೀನ್, ಮುರುಷದ್ ಪೀರ್ ಖಾದ್ರಿ ಕಣೇಕಲ್, ಸೈಯ್ಯದ್ ಪೀರ್ ಭಾಷ ಖಾದ್ರಿ ಮುಕ್ಕುಂದ ಮತ್ತು ಖಾದ್ರಿ ಸುಭಾನ್ ಹಳೇಕೋಟೆ ಅವರ ಅಧ್ಯಕ್ಷತೆಯಲ್ಲಿ ಜರುಗಿ ಹಳೇಕೋಟೆ ಗ್ರಾಮದ ಖಾಸಿಂನಲಿ ದರ್ಗಾದಲ್ಲಿ ಸಮಾವೇಶಗೊಂಡಿತು.
ಉರುಸಿನ ದಿನ ಸೋಮವಾರ ಸಂಜೆ ವಿಶೇಷ ಪ್ರಾರ್ಥನೆ ಜರುಗಿತು. ರಾತ್ರಿ 9 ಗಂಟೆಗೆ ಸುಪ್ರಸಿದ್ಧ ಖವ್ವಾಲರಾದ ಬೆಂಗಳೂರಿನ ತೌಸೀಫ್ ಖಾದ್ರಿ ಇವರಿಂದ ವಿಶೇಷ ಖವ್ವಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ನೆರೆಯ ಸೀಮಾಂಧ್ರದ ಊರುಗಳಿಂದ ಆಗಮಿಸಿದ್ದ ಭಕ್ತರು ಉರುಸ್ ವೈಭವವನ್ನು ಕಂಣ್ತುಂಬಿಕೊಂಡರು. ಮಂಗಳವಾರ ಜಿಯಾರತ್ ಕಾರ್ಯಕ್ರಮ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.