ಸಿರುಗುಪ್ಪ ತಾಲ್ಲೂಕಿನ ವೇದಾವತಿ ಹಗರಿ ನದಿ ಉಕ್ಕಿ ಹರಿಯುತ್ತಿದೆ
ಸಿರುಗುಪ್ಪ: ತಾಲ್ಲೂಕಿನಾದ್ಯಂತ ಸೋಮವಾರ ತಡ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಹತ್ತಿ, ಮೆಕ್ಕೆಜೋಳ, ನವಣೆ, ಮೆಣಸಿನಕಾಯಿ, ಭತ್ತ ಜಲಾವೃತಗೊಂಡು ಭಾರಿ ಪ್ರಮಾಣದ ಬೆಳೆ ನಷ್ಟವಾಗಿದೆ.
ತಾಲ್ಲೂಕಿನ ರಾರಾವಿ ಗ್ರಾಮದ ಹತ್ತಿರ ವೇದಾವತಿ ಹಗರಿ ನದಿ ಮತ್ತು ಯಲ್ಲಮ್ಮನ ಹಳ್ಳ ಉಕ್ಕಿ ಹರಿಯುತ್ತಿದೆ. ನದಿ ಮತ್ತು ಹಳ್ಳದ ಪಾತ್ರದಲ್ಲಿರುವ ರೈತರ ಪಂಪ್ ಸೆಟ್‍ಗಳಿಗೆ ನೀರು ನುಗ್ಗಿದ್ದವು, ಅವುಗಳನ್ನು ರಕ್ಷಿಸಲು ರೈತರು ಅರಸಾಹಸ ಮಾಡಿದರು. ಯಲ್ಲಮ್ಮನ ಹಳ್ಳ ಉಕ್ಕಿ ಸೇತುವೆ ಮೇಲೆ ಹರಿದ ಪರಿಣಾಮ ಕೆಲ ಕಾಲ ಸಂಚಾರ ವ್ಯತ್ಯಯವಾಗಿತ್ತು.
ನಗರದ ಪೊಲೀಸ್ ಠಾಣೆ, ಪೊಲೀಸ್ ವಸತಿ ಆವರಣದಲ್ಲಿ, ಕೃಷಿ ಇಲಾಖೆ ಮುಂದೆ, ಹಳೇ ತಹಶೀಲ್ದಾರ ಕಚೇರಿಯ, ತಾಲ್ಲೂಕು ಪಂಚಾಯಿತಿ, ಸಿಡಿಪಿಒ, ನೋಂದಣಿ ಇಲಾಖೆಯ ಆವರಣದಲ್ಲಿ, ಕೆ.ಇ.ಬಿ.ಕಚೇರಿ, ಸಾರ್ವಜನಿಕರ ಆಸ್ಪತ್ರೆಯ ಮುಂದೆ, 7 ಮತ್ತು 8ನೇ ವಾರ್ಡಿನ ಶಾಲಾ ಆವರಣದಲ್ಲಿ, ತಾಲ್ಲೂಕು ಕ್ರೀಡಾಂಗಣದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತ ಪರಿಣಾಮವಾಗಿ ಹಿರಿಯ ನಾಗರಿಕರು, ಚಿಕ್ಕಮಕ್ಕಳು, ಸಾರ್ವಜನಿಕರು ಒಡಾಟಕ್ಕೆ ತೊಂದರೆ ಆಯಿತು.
ಕೆಲವೊಂದು ಕಾಲೊನಿ ಮತ್ತು ಓಣಿಗಳಲ್ಲಿ ಮಳೆ ನೀರಿನಿಂದಾಗಿ ಚರಂರಡಿ ತುಂಬಿ ತಗ್ಗು ಪ್ರದೇಶದ ಮನೆ, ಹೋಟೆಲ್, ರಸ್ತೆಯ ಮೇಲೆ ಹರಿದು ಗಬ್ಬು ನಾರುವಂತೆ ಆಗಿದೆ. ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಚರಂಡಿ ತ್ಯಾಜ್ಯ ಮತ್ತು ಮಾಲಿನ್ಯ ಹರಿದ ಪರಿಣಾಮ ಮೂಗು ಮುಚ್ಚಿಕೊಂಡು ವ್ಯಾಪಾರ ನಡೆಸುವಂತೆ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.