ADVERTISEMENT

ಕಂಪ್ಲಿ: ಪ್ರಯಾಣಿಕರಿಗೆ ಹಣ ಇದ್ದ ಪರ್ಸ್‌ ಮರಳಿಸಿದ ಬಸ್ ಚಾಲಕ 

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 5:47 IST
Last Updated 17 ಅಕ್ಟೋಬರ್ 2025, 5:47 IST
ಕಂಪ್ಲಿಯ ಚಾಲಕ ಶ್ರೀಕಾಂತ, ಸಿಂಧನೂರಿನ ಕೆ.ಕೆ.ಆರ್.ಟಿ.ಸಿ ಸಂಚಾರ ನಿಯಂತ್ರಕ  ಶಶಿಧರ ಪಾಟೀಲ್ ಅವರು ಪ್ರಯಾಣಿಕ ಕೆ.ವಿ. ಸತ್ಯನಾರಾಯಣ ಅವರಿಗೆ ಹಣ, ದಾಖಲೆಗಳ ಪರ್ಸ್ ಅನ್ನು ಹಿಂತಿರುಗಿಸಿದರು  
ಕಂಪ್ಲಿಯ ಚಾಲಕ ಶ್ರೀಕಾಂತ, ಸಿಂಧನೂರಿನ ಕೆ.ಕೆ.ಆರ್.ಟಿ.ಸಿ ಸಂಚಾರ ನಿಯಂತ್ರಕ  ಶಶಿಧರ ಪಾಟೀಲ್ ಅವರು ಪ್ರಯಾಣಿಕ ಕೆ.ವಿ. ಸತ್ಯನಾರಾಯಣ ಅವರಿಗೆ ಹಣ, ದಾಖಲೆಗಳ ಪರ್ಸ್ ಅನ್ನು ಹಿಂತಿರುಗಿಸಿದರು     

ಕಂಪ್ಲಿ: ಪ್ರಯಾಣಿಕರೊಬ್ಬರು ಕೆಕೆಆರ್‌ಟಿಸಿ ಬಸ್‍ನಲ್ಲಿಯೇ ಬಿಟ್ಟು ಹೋಗಿದ್ದ ₹ 24ಸಾವಿರ ನಗದು, ಎಟಿಎಂ ಕಾರ್ಡ್, ಕೆಲ ದಾಖಲೆಗಳಿದ್ದ ಪರ್ಸ್ ಅನ್ನು ಹಿಂತಿರುಗಿಸುವ ಮೂಲಕ ಕಂಪ್ಲಿಯ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಕುರಿತು ಚಾಲಕ ಶ್ರೀಕಾಂತ ಗುರುವಾರ ಮಾತನಾಡಿ, ಕೆಕೆಆರ್‌ಟಿಸಿ ಕೊಪ್ಪಳ ವಿಭಾಗ ಗಂಗಾವತಿ ಘಟಕದ ವಿಜಯವಾಡ- ಗಂಗಾವತಿ ಬಸ್‍ನಲ್ಲಿ ಖಾಸಗಿ ಕಂಪನಿಯ ನಿರ್ದೇಶಕ ಕೆ.ವಿ. ಸತ್ಯನಾರಾಯಣ ಎನ್ನುವ ಪ್ರಯಾಣಿಕ ಬಸ್‍ನಲ್ಲಿಯೇ ಪರ್ಸ್ ಮರೆತು ನೀರಮಾನ್ವಿಯಲ್ಲಿ ಇಳಿದಿದ್ದರು. ಬಳಿಕ ನನಗೆ ಮೊಬೈಲ್ ಕರೆ ಮಾಡಿ ತಿಳಿಸುತ್ತಿದ್ದಂತೆ ಬಸ್‍ನಲ್ಲಿ ಹುಡುಕಿದಾಗ ಪರ್ಸ್ ದೊರೆಯಿತು. ಸಿಂಧನೂರಿನ ಸಂಚಾರ ನಿಯಂತ್ರಕ ಶಶಿಧರ ಪಾಟೀಲ್ ಅವರ ಸಮ್ಮುಖದಲ್ಲಿ ಪ್ರಯಾಣಿಕನಿಗೆ ಪರ್ಸ್ ತಲುಪಿಸಿದ್ದಾಗಿ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT