ಹೂವಿನಹಡಗಲಿ: ಪಟ್ಟಣದ ನಾಗರಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ವಾರದೊಳಗೆ ಮನೆ ಬಾಗಿಲಿಗೆ ತೆರಳಿ ಫಾರಂ-3 (ಖಾತಾ ನಕಲು) ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್ ತಿಳಿಸಿದರು.
ಸ್ವತ್ತಿನ ಕ್ರಯಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ನಡವಳಿ ಪತ್ರ, ತೆರಿಗೆ ಪಾವತಿಸಿರುವ ದಾಖಲೆ ಸಲ್ಲಿಸಿದರೆ ವಾರದೊಳಗೆ ಫಾರಂ-3 ಆಸ್ತಿಯ ದಾಖಲೆಯನ್ನು ಮನೆಗೆ ತಲುಪಿಸುತ್ತೇವೆ. ಪಟ್ಟಣದ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.