ADVERTISEMENT

ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:16 IST
Last Updated 29 ಜೂನ್ 2025, 16:16 IST
ಹೂವಿನಹಡಗಲಿ ತಾಲ್ಲೂಕಿನ ಉಪನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ಹೂವಿನಹಡಗಲಿ ತಾಲ್ಲೂಕಿನ ಉಪನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ಪ್ರಜಾವಾಣಿ ವಾರ್ತೆ

ಹೂವಿನಹಡಗಲಿ: ತಾಲ್ಲೂಕಿನ ಉಪನಾಯಕನಹಳ್ಳಿಯಲ್ಲಿ ಪಿ.ಎಂ. ಗುರುನಂಜಯ್ಯ, ವೀರಮ್ಮ ಸ್ಮರಣಾರ್ಥ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗುರುರಕ್ಷೆ ನೀಡಿ ಸತ್ಕರಿಸಲಾಯಿತು.

ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಮಾನಿಹಳ್ಳಿಯ ಮಳೆಯೋಗೀಶ್ವರ ಸ್ವಾಮೀಜಿ, ಅಳವುಂಡಿ ಮಠದ ಮರುಳಾರಾಧ್ಯ ಸ್ವಾಮೀಜಿ, ಕೂಡ್ಲಿಗಿಯ ಪ್ರಶಾಂತ ಸಾಗರ ಸ್ವಾಮೀಜಿ, ಹಿರೇಹಡಗಲಿಯ ಶಿವಯೋಗಿ ಹಾಲಸ್ವಾಮೀಜಿ, ಅಭಿನವ ಹಾಲವೀರಪಜ್ಜ ಸ್ವಾಮೀಜಿ, ಶಿವಯೋಗಿ ವಿಶ್ವೇಶ್ವರ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

ಬಳ್ಳಾರಿ ವಿಮ್ಸ್‌ನ ನಿವೃತ್ತ ವೈದ್ಯಾಧಿಕಾರಿ ಡಾ. ಶಿವಶಂಕರಪ್ಪ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೃಷಿ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಸುಷ್ಮಾ, ನೀರುಗಂಟಿಯಾಗಿ ಸೇವೆ ಸಲ್ಲಿಸಿದ ಬೆನ್ನೂರು ನಾಗಪ್ಪ ಅವರಿಗೆ ಗುರುರಕ್ಷೆ ನೀಡಲಾಯಿತು.

ಪಿ.ಎಂ. ದೊಡ್ಡಬಸಯ್ಯ, ಪಿ.ಎಂ. ಶ್ರೀಧರಯ್ಯ, ಪಿ.ಎಂ. ಚನ್ನವೀರಯ್ಯ, ಪಿ.ಎಂ. ಹಾಲಬಸವರಾಜ, ಪಿ.ಎಂ. ವೀರೇಶ, ಎಚ್.ಕೆ. ಮಹೇಶ, ಎಚ್. ಕೊಟ್ರೇಶ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.