ADVERTISEMENT

ಸಿರುಗುಪ್ಪ: ಅಕ್ರಮ ಮದ್ಯ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 15:58 IST
Last Updated 24 ಆಗಸ್ಟ್ 2023, 15:58 IST
ಸಿರುಗುಪ್ಪ ತಾಲ್ಲೂಕಿನ ರಾರಾವಿ ಹತ್ತಿರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಯಾಣಿಕರ ಆಟೋ ಮತ್ತು ಮದ್ಯವನ್ನು ಸಿರುಗುಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಸಿರುಗುಪ್ಪ ತಾಲ್ಲೂಕಿನ ರಾರಾವಿ ಹತ್ತಿರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಯಾಣಿಕರ ಆಟೋ ಮತ್ತು ಮದ್ಯವನ್ನು ಸಿರುಗುಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ   

ಸಿರುಗುಪ್ಪ: ತಾಲ್ಲೂಕಿನ ರಾರಾವಿ ಗ್ರಾಮದ ಹತ್ತಿರ ಆದೋನಿ ರಸ್ತೆಯ ಯಲ್ಲಮ್ಮನ ಹಳ್ಳದ ಹತ್ತಿರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಯಾಣಿಕರ ಆಟೊ ಮತ್ತು ಮದ್ಯವನ್ನು ಸಿರುಗುಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಟೋ ಚಾಲಕ ಪರಾರಿಯಾಗಿದ್ದು, ಆಟೋದಲ್ಲಿದ್ದ ಮದ್ಯ ತುಂಬಿದ 12 ರಟ್ಟಿನ ಬಾಕ್ಸ್‌ಗಳು, ಪ್ಲಾಸ್ಟಿಕ್ ಚೀಲದಲ್ಲಿದ್ದ 90 ಎಂ.ಎಲ್.ನ 283 ಮದ್ಯದ ಪೌಚ್‍ಗಳು ಸೇರಿದಂತೆ 129 ಲೀ. ಮದ್ಯ ₹57,543 ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ಸಿ.ಪಿ.ಐ. ಸುಂದರೇಶ ಹೊಳೆಣ್ಣನವರ್ ತಿಳಿಸಿದ್ದಾರೆ.

ಖಚಿತ ಮಾಹಿತಿಯೊಂದಿಗೆ ತನಿಖೆ ಪಿ.ಎಸ್.ಐ.ಹೊನ್ನಪ್ಪ ನೇತೃತ್ವದಲ್ಲಿ ಎ.ಎಸ್.ಐ ಸೂರ್ಯನಾರಾಯಣ, ಸಿಬ್ಬಂದಿ ಚಿನ್ನಪ್ಪ, ಬಸವರಾಜ, ವಿಜಯ ನಿಂಗಣ್ಣವರ್, ಯಶವಂತ್‍ ತಂಡದೊಂದಿಗೆ ವಾಹನ ತಪಾಸಣೆ ಮಾಡುವಾಗ ಅಕ್ರಮ ಮದ್ಯ ಪತ್ತೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.