ಕಂಪ್ಲಿ: ಗಣೇಶ ಹಬ್ಬದ ವೇಳೆ ಪೆಂಡಾಲ್‍ಗಳಿಗೆ ಯಾವುದೇ ಕಾರಣಕ್ಕೂ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಾರದು ಎಂದು ಜೆಸ್ಕಾಂ ತಿಳಿಸಿದೆ.
ಯಾವುದೇ ಎಚ್.ಟಿ ಅಥವಾ ಎಲ್.ಟಿ. ವಿದ್ಯುತ್ ಜಾಲಗಳ ಅಡಿಯಲ್ಲಿ ಗಣೇಶ ಪ್ರತಿಮೆಯ ಪೆಂಡಾಲ್ ಹಾಕಬಾರದು. ವಿದ್ಯುತ್ ಕಂಬಗಳಿಗೆ ಅಥವಾ ವಿದ್ಯುತ್ ಪರಿವರ್ತಕ ಕೇಂದ್ರದ ಕಂಬಗಳಿಗೆ ಶಾಮಿಯಾನ, ಬ್ಯಾನರ್‍ಗಳನ್ನು ಕಟ್ಟಬಾರದು.
ವಿದ್ಯುತ್ ಬಳಸುವ ಯಾವುದೇ ನಿಯಮಗಳ ಉಲ್ಲಂಘನೆಯಿಂದ ಆಗುವ ಅನಾಹುತಗಳಿಗೆ ಗಣೇಶ ಪ್ರತಿಮೆ ಕೂಡಿಸುವ ಸಂಘಟನೆಯ ಮುಖ್ಯಸ್ಥರನ್ನೇ ನೇರ ಹೊಣೆಗಾರರಾಗುತ್ತಾರೆ. ಜೆಸ್ಕಾಂ ಕಂಪನಿಯ ನಿಯಮಾನುಸಾರ ಅನುಮೋದನೆ ಪಡೆದು, ಅಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಎಂದು ಇಲ್ಲಿನ ಜೆಸ್ಕಾಂ ಎಇಇ ಜಿ.ಎನ್.ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.