ADVERTISEMENT

ಆದಾಯ ತೆರಿಗೆ ಭಯ ಬೇಡ, ಅರಿವು ಬೆಳೆಸಿಕೊಳ್ಳಿ: ಕೆ.ಲೋಕೇಶ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:05 IST
Last Updated 11 ಡಿಸೆಂಬರ್ 2025, 6:05 IST
ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಆದಾಯ ತೆರಿಗೆ ಜಾಗೃತಿ ಸಭೆಯನ್ನು ಹೊಸಪೇಟೆಯ ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಉದ್ಘಾಟಿಸಿದರು
ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಆದಾಯ ತೆರಿಗೆ ಜಾಗೃತಿ ಸಭೆಯನ್ನು ಹೊಸಪೇಟೆಯ ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಉದ್ಘಾಟಿಸಿದರು   

ಹೂವಿನಹಡಗಲಿ: ಆದಾಯ ತೆರಿಗೆ ವಿಚಾರವಾಗಿ ಸಾರ್ವಜನಿಕರು ಅನಗತ್ಯ ಭಯಪಡಬಾರದು. ಈ ಕುರಿತು ಅರಿವು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ತೆರಿಗೆ ಪಾಲು ನೀಡಿ ಸಹಕರಿಸಬೇಕು ಎಂದು ಹೊಸಪೇಟೆಯ ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಹೇಳಿದರು.

ಪಟ್ಟಣದ ಗವಿಮಠದಲ್ಲಿ ಆದಾಯ ತೆರಿಗೆ ಇಲಾಖೆ, ಹೂವಿನಹಡಗಲಿ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

‘ಹೊಸ ತೆರಿಗೆ ಪದ್ಧತಿಯಲ್ಲಿ ಸರ್ಕಾರ ಹಲವು ಸುಧಾರಣೆಗಳನ್ನು ತಂದು ನಿಯಮಗಳನ್ನು ಸಡಿಲಿಕೆ ಮಾಡಿದೆ. ದೇಶದ ಅಭಿವೃದ್ಧಿಯಲ್ಲಿ ತೆರಿಗೆದಾರರ ಪಾತ್ರ ಬಹಳ ಮುಖ್ಯವಾಗಿದೆ. ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ನಾಲ್ಕು ಕಂತುಗಳಲ್ಲಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ತೆರಿಗೆ ಪದ್ದತಿ ಕುರಿತು ಎಲ್ಲರೂ ಅರಿವು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಲೆಕ್ಕ ಪರಿಶೋಧಕ ಜಿ.ರಮೇಶ, ಅಕ್ಕಿ ಬಸವರಾಜ ಮಾತನಾಡಿ, ಲೆಕ್ಕ ಪರಿಶೋಧಕ ಅಕ್ಕಿ ಬಸವರಾಜ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ತೆರಿಗೆದಾರರ ಪಾತ್ರ ಮುಖ್ಯವಾಗಿದೆ. ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿದಾಗ ವರ್ತಕರು ಭಯದಿಂದ ಅಂಗಡಿ ಮುಂಗಟ್ಟೆ ಮುಚ್ಚಿಕೊಂಡು ಹೋಗುತ್ತಿದ್ದರು. ಈಗ ಕಾಲ ಬದಲಾಗಿದ್ದು, ಭಯಪಡುವ ಅಗತ್ಯವಿಲ್ಲ. ಅನಗತ್ಯ ತೆರಿಗೆ ವಿಧಿಸಿದ್ದರೆ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು ಎಂದರು.

ಎಂ.ಸತ್ಯನಾರಾಯಣ, ಎಂ.ಉಮೇಶ, ಸರ್ಪಭೂಷಣ, ಎಸ್.ಎಂ.ರವೀಂದ್ರಶೆಟ್ಟಿ, ಆದಾಯ ತೆರಿಗೆ ಇಲಾಖೆಯ ನಿಖಿಲ್, ಮಲ್ಲಿಕಾರ್ಜುನರೆಡ್ಡಿ, ರಾಘವೇಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.