ADVERTISEMENT

ಕೋವಿಡ್‌ ಮೃತರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 9:28 IST
Last Updated 8 ಆಗಸ್ಟ್ 2021, 9:28 IST
ಹೊಸಪೇಟೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಜನನಿ ಮಹಿಳಾ ಸಬಲೀಕರಣ ಸಮಿತಿಯ ಕಾರ್ಯಕಾರಿಣಿಯನ್ನು ಸಮಿತಿಯ ಪದಾಧಿಕಾರಿಗಳು ಸಸಿಗೆ ನೀರೆರೆದು ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಜನನಿ ಮಹಿಳಾ ಸಬಲೀಕರಣ ಸಮಿತಿಯ ಕಾರ್ಯಕಾರಿಣಿಯನ್ನು ಸಮಿತಿಯ ಪದಾಧಿಕಾರಿಗಳು ಸಸಿಗೆ ನೀರೆರೆದು ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ನಗರದಲ್ಲಿ ಶನಿವಾರ ಸಂಜೆ ನಡೆದ ಜನನಿ ಮಹಿಳಾ ಸಬಲೀಕರಣ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಕೋವಿಡ್‌ನಿಂದ ಮೃತರಾದ ಸಮಿತಿ ಸದಸ್ಯೆಯರಾದ ಕೆರೋಲಿನ್‌, ಶಕ್ತೀಶ್ವರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಮಿತಿಯ ಅಧ್ಯಕ್ಷೆ ನಾಗವೇಣಿ ಹಂಪಿ ಉದ್ಘಾಟಿಸಿ, ‘ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಕುರಿತು ಬೇರೆಯವರಿಗೂ ತಿಳಿಸಬೆಕು’ ಎಂದು ಹೇಳಿದರು.

‘ಸಂಕಷ್ಟದ ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಜತೆಗೂಡಿ ಕೆಲಸ ನಿರ್ವಹಿಸೋಣ. ಸರ್ಕಾರಿ ಆಸ್ಪತ್ರೆಯಲ್ಲಿರುವ ಗರ್ಭೀಣಿಯರು, ಬಾಣಂತಿಯರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗೋಣ’ ಎಂದರು.

ADVERTISEMENT

ಸಮಿತಿ ಗೌರವ ಅಧ್ಯಕ್ಷೆ ರೇಖಾರಾಣಿ, ಪ್ರಧಾನ ಕಾರ್ಯದರ್ಶಿ ಹುಲಿಗೆಮ್ಮ, ಉಪಾಧ್ಯಕ್ಷರಾದ ಗೀತಾಶಂಕರ್, ರೋಫಿಯಾ, ಕಾರ್ಯದರ್ಶಿಗಳಾದ ರಾಜೇಶ್ವರಿ, ಆಯಿಶಾ, ಸಂಚಾಲಕರಾದ ಸ್ವಾತಿ ಸಿಂಗ್, ಯುವ ನಾಯಕ ಸಂದೀಪ್ ಸಿಂಗ್, ಎನ್.ವೆಂಕಟೇಶ್, ಗೋವಿಂದ್ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.