ADVERTISEMENT

ಬಳ್ಳಾರಿಗೆ‌ ಬಂದ  ಜನಾರ್ದನರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 15:58 IST
Last Updated 8 ಜೂನ್ 2019, 15:58 IST
   

ಬಳ್ಳಾರಿ: ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಮೇರೆಗೆ ನಗರಕ್ಕೆ ಶನಿವಾರ ಸಂಜೆ ಬಂದ ಅವರು, ಅನಾರೋಗ್ಯಪೀಡಿತರಾದ ತಮ್ಮ ಮಾವ ಪರಮೇಶ್ವರ ರೆಡ್ಡಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ರಾತ್ರಿ‌ ಒಂಭತ್ತರ ವೇಳೆಗೆ ಅವಂಬಾವಿ‌ ಪ್ರದೇಶದ ತಮ್ಮ ಮನೆಗೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿಯಿಂದ ದೂರ ಇರುವುದು ಎಷ್ಟು ಕಷ್ಟ ಎಂಬುದು ನನಗೆ ಮತ್ತು ಆ ದೇವರಿಗಷ್ಟೇ ಗೊತ್ತು' ಎಂದರು.

ತುಂಬುತೋಳಿನ ಕೆಂಪು ಷರ್ಟ್ ಮತ್ತು‌ ಕಪ್ಪು‌ಬಣ್ಣದ ಪ್ಯಾಂಟ್ ಧರಿಸಿದ್ದ ಅವರ ಮುಖದಲ್ಲಿ ಸಂತಸ ಹೊಳೆಯುತ್ತಿತ್ತು.

ADVERTISEMENT

ಸುಮಾರು ಮೂರು ನಿಮಿಷ ಮಾತ್ರ ಅನೌಪಚಾರಿಕವಾಗಿಯಷ್ಟೇ ಮಾತನಾಡಿದ ಅವರು, 'ಹದಿನೈದು ದಿನದಲ್ಲಿ ಮಾವನವರ ಆರೋಗ್ಯದ ಬಗ್ಗೆ ಕಾಳಜಿ‌ ವಹಿಸುವೆ. ನನ್ನ ತಂದೆ- ತಾಯಿಯವರ ಸ್ಮರಣೆಯಲ್ಲಿ‌ ಸ್ಥಾಪಿಸಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮಕ್ಕೆ ಭೇಟಿ ನೀಡುವೆ.ಬಳ್ಳಾರಿಯಲ್ಲಿರುವ ಒಡನಾಡಿಗಳನ್ನು ಭೇಟಿ ಮಾಡುವೆ' ಎಂದರು.

ದಸರಾ ಹಬ್ಬದ ಆಚರಣೆಗೆಂದು ಅವರು ಬಳ್ಳಾರಿಗೆ ಬಂದಿದ್ದರು. ಸುಮಾರು ಒಂದೂವರೆ ವರ್ಷದ ಬಳಿಕ ಅವರು ಮತ್ತೆ ಬಂದಿದ್ದಾರೆ.

ರೆಡ್ಡಿಯವರ ಹಿರಿಯ ಸಹೋದರ, ಶಾಸಕ ಜಿ.ಸೋಮಶೇಖರ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.