ಹೊಸಪೇಟೆ: ಹಂಪಿ ಕೋರ್ ವಲಯದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಜೆಸಿಬಿ ಬದಲು ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಮುಂದುವರೆಸಲಾಗಿದೆ.
'ಆಗ ಕೊಳವೆಬಾವಿ, ಈಗ ಪೈಪ್‌ಲೈನ್' ಶೀರ್ಷಿಕೆ ಅಡಿ ನ. 7ರಂದು (ಶನಿವಾರ) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ವರದಿಗೆ ಎಚ್ಚೆತ್ತುಕೊಂಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ತೋಟಗಾರಿಕೆ ವಿಭಾಗವು ಈಗ ಯಂತ್ರೋಪಕರಣಗಳ ಬದಲು ಕಾರ್ಮಿಕರ ಮೂಲಕ ಕಾಮಗಾರಿ ನಡೆಸುತ್ತಿದೆ.
ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಹಾಗೂ ಉದ್ಯಾನ ನಿರ್ವಹಣೆಗಾಗಿ ಹಂಪಿಯ ಕೋರ್ ಜೋನ್ ವ್ಯಾಪ್ತಿಗೆ ಬರುವ ಚಂದ್ರಶೇಖರ ದೇವಸ್ಥಾನ ಸಮೀಪ ಕೊಳವೆಬಾವಿ ಕೊರೈಸಲಾಗಿದೆ. ಈಗ ಅಲ್ಲಿಂದ ಹಂಪಿಯ ಪರಿಸರದೊಳಕ್ಕೆ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ಜೆಸಿಬಿ ಬಳಸಲಾಗಿತ್ತು.
ಇದನ್ನೂ ಓದಿ: ಹೊಸಪೇಟೆ: ಆಗ ಕೊಳವೆಬಾವಿ, ಈಗ ಪೈಪ್‌ಲೈನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.