ADVERTISEMENT

ಸುಮಲತಾ ಜೊತೆ‌ ಜೆಡಿಎಸ್-ಕಾಂಗ್ರೆಸ್ ದುರ್ವರ್ತನೆ ಅವರಿಗೆ ಮುಳುವಾಗಲಿದೆ:ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 6:00 IST
Last Updated 2 ಏಪ್ರಿಲ್ 2019, 6:00 IST
   

ಬಳ್ಳಾರಿ: ಮಂಡ್ಯದ ಪಕ್ಷೇತರ ಅಭ್ಯರ್ಥಿ‌ ಎ. ಸುಮಲತಾ ಅವರೊಂದಿಗೆ ಮೈತ್ರಿ‌ ಪಕ್ಷಗಳ ನಡೆದುಕೊಳ್ಳುತ್ತಿರುವ ರೀತಿ ಎರಡೂ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ‌ಉಪಾಧ್ಯಕ್ಷ ‌ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ‌ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ‌ಬದುಕಿದ್ದಾಗ ಹಾಡಿ ಹೊಗಳಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಂಬರೀಶ್ ಕೊಡುಗೆ ಏನು ಎಂದು ಈಗ ಕೇಳುತ್ತಿರುವುದನ್ನು ಮತದಾರರು ಗಮನಿಸಿದ್ದಾರೆ. ಇಡೀ ರಾಜ್ಯದಲ್ಲಿ‌ ಇದು ಪರಿಣಾಮ ಬೀರಲಿದೆ ಎಂದರು.

ಚುನಾವಣೆಗೂ‌ ಮುನ್ನವೇ ಕುಮಾರಸ್ವಾಮಿಯವರಿಗೆ ಮಂಡ್ಯದಲ್ಲಿ ಸೋಲಿನ ಅನುಭವವಾಗಿರುವುದರಿಂದ ಅವರು ಆ ರೀತಿ‌ ವರ್ತಿಸುತ್ತಿದ್ದಾರೆ ಎಂದರು.

ADVERTISEMENT

ಮಾಜಿ‌ ಪ್ರಧಾನಿಯಾಗಿದ್ದರೂ ಎಚ್. ಡಿ.ದೇವೇಗೌಡರಿಗೆ ಯಾವ ಕ್ಷೇತ್ರದಲ್ಲಿ ‌ಸ್ಪರ್ಧಿಸಬೇಕು ಎಂಬ ಪರಿಸ್ಥಿತಿ‌ ಬರಬಾರದಿತ್ತು. ಕೊನೆಗೆ ಅವರು ತುಮಕೂರಿನಲ್ಲಿ‌ ಸ್ಪರ್ಧಿಸಿದ್ದಾರೆ ಎಂದು ವಿಷಾದಿಸಿದರು.

ನನ್ನದೆಂದು ಹೇಳಲಾಗಿರುವ ಡೈರಿಯಲ್ಲಿರುವ ವಿಷಯಗಳನ್ನು ಎಐಸಿಸಿ ಅಧ್ಯಕ್ಷ‌ ರಾಹುಲ್ ಗಾಂಧಿ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ‌ಹೇಳಿದರು.

ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ‌ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಾಗಿದೆ. ‌ದೇಶದ ಆರ್ಥಿಕ ಪರಿಸ್ಥಿತಿಯಲ್ಲೂ ಸುಧಾರಣೆಯಾಗಿದೆ. ಬಿಜೆಪಿ ದೇಶದಲ್ಲಿ ೩೦೦ ಹಾಗೂ ರಾಜ್ಯದಲ್ಲಿ ೨೨ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾವುದೇ ಗೊಂದಲವಿಲ್ಲ.‌ ಪಕ್ಷದ ಎಲ್ಲ ಮುಖಂಡರೂ ಪ್ರಚಾರ ನಡೆಸಲಿದ್ದಾರೆ.ಬಹಳ ‌ದೊಡ್ಡ ಅಂತರದಲ್ಲಿಯೇ ಗೆಲ್ಲುತ್ತೇವೆ.ವಾತಾವರಣ ಬಿಜೆಪಿ ಪರವಾಗಿದೆ.ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ‌ಬೀರಲಿದೆ. ಮೈತ್ರಿ ಸರ್ಕಾರ ಬೀಳಲಿದೆಎಂದು‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.