ಹರಪನಹಳ್ಳಿ: ತಾಲ್ಲೂಕಿನ ವಿವಿಧೆಡೆ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಅಳಗಂಚಿಕೇರಿಯಲ್ಲಿ ಬೀಸಿದ ಗಾಳಿಗೆ ಬೇವಿನ ಮರ ಬಿದ್ದು ಕಾಳಮ್ಮ ಮತ್ತು ಪಕ್ಕೀರಮ್ಮ ಅವರ ಮನೆಗಳು ಬಾಗಶಃ ಹಾನಿಯಾಗಿವೆ. ಮೈದೂರಿನಲ್ಲಿ ಲಿಂಬಕ್ಕ ಹನುಮನಹಳ್ಳಿ ಹಾಗೂ ಕಣಿವಿಹಳ್ಳಿಯಲ್ಲಿ ಪೂಜಾರ ಹಾಲಪ್ಪ ಅವರುಗಳ ಮನೆ ಬಿದ್ದಿವೆ ಎಂದು ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.