ಕುರುಗೋಡು: ಭತ್ತದ ಗದ್ದೆ ಹದಗೊಳಿಸಲು ಬಳಸುವ ಕೆಜಿವೀಲ್‌ಗಳನ್ನು ರಸ್ತೆಯ ಮೇಲೆ ಸಂಚರಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಸುಪ್ರಿತ್ ಎಚ್ಚರಿಸಿದರು.
ತಾಲ್ಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ಭತ್ತದ ಗದ್ದೆಗಳಿಗೆ ಗುರುವಾರ ಭೇಟಿನೀಡಿದ್ದ ಅವರು, ರೈತರೊಂದಿಗೆ ಚರ್ಚಿಸಿದರು.
ಕೆಜಿವೀಲ್‌ಗಳನ್ನು ಅಳವಡಿಸಿದ ಟ್ರಾಕ್ಟರ್ ಸಂಚರಿಸುವುದರಿಂದ ಡಾಂಬರ್ ರಸ್ತೆ ಕೆಲ ದಿನಗಳಲ್ಲಿಯೇ ಹಾಳಾಗುತ್ತಿದೆ. ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಸಂಚಾರ ನಿಯಮದ ಪ್ರಕಾರ ಕೆಜಿ ವೀಲ್‌ಗಳನ್ನು ರಸ್ತೆಗಳ ಮೇಲೆ ಸಂಚರಿಸುವಂತಿಲ್ಲ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದರೂ ನಿಯಮ ಉಲ್ಲಂಘನೆ ಮುಂದುವರೆದಿರುವುದು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಠಾಣಾ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ಭೇಟಿ ನೀಡುವ ಪೊಲೀಸ್ ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸುತ್ತಾರೆ. ಎಚ್ಚರಿಕೆಯ ನಂತರವೂ ಮುಂದುವರೆದರೆ ಟ್ರಾಕ್ಟರ್ ವಶಪಡಿಸಿಕೊಂಡು ಚಾಲಕರು ಮತ್ತು ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.