ADVERTISEMENT

ಬಳ್ಳಾರಿ | ಕೆಎಸ್‌ಟಿಡಿಸಿ ಎಂ.ಡಿ ಆಗಿ ಮಿಶ್ರಾ ನೇಮಕ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:56 IST
Last Updated 12 ಸೆಪ್ಟೆಂಬರ್ 2025, 4:56 IST
ಪ್ರಶಾಂತ್‌ ಕುಮಾರ್‌ ಮಿಶ್ರಾ 
ಪ್ರಶಾಂತ್‌ ಕುಮಾರ್‌ ಮಿಶ್ರಾ    

ಬಳ್ಳಾರಿ: ಬಳ್ಳಾರಿಯ ನಿರ್ಗಮಿತ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ರಾತ್ರಿ ಅಧಿಸೂಚನೆ ಹೊರಡಿಸಿದೆ.

ಈ ಹಿಂದೆ ರಾಜೇಂದ್ರ ಕೆ.ವಿ ಅವರು ಕೆಎಸ್‌ಟಿಡಿಸಿ ಎಂ.ಡಿ. ಆಗಿದ್ದರು. ವೈಯಕ್ತಿಕ ಕಾರ್ಯಕ್ರಮ ಹಿನ್ನೆಲೆ ಬಿಹಾರದ ತಮ್ಮ ಹುಟ್ಟೂರಿಗೆ ತೆರಳಿರುವ ಮಿಶ್ರಾ, ಅಲ್ಲಿಂದ ಬಂದ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT