ಹೊಸಪೇಟೆ (ವಿಜಯನಗರ): ಇಲ್ಲಿನ ಆರ್ಯವೈಶ್ಯ ಸಂಘದ ಅಧ್ಯಕ್ಷರಾಗಿ ಪತ್ತಿಕೊಂಡ ಕುಮಾರಸ್ವಾಮಿ ಶೆಟ್ಟಿ ಆಯ್ಕೆಯಾದರು.
ನಗರದಲ್ಲಿ ಗುರುವಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮೂರು ವರ್ಷದ ಅವಧಿಗೆ ಹೊಸಬರನ್ನು ಆಯ್ಕೆ ಮಾಡಲಾಯಿತು.
ಎಂ. ಸತ್ಯನಾರಾಯಣ ಶೆಟ್ಟಿ (ಕಾರ್ಯದರ್ಶಿ), ನರೇಗಲ್ ನೀಲಕಂಠಶೆಟ್ಟಿ (ಖಜಾಂಚಿ), ಕಾಕುಬಾಳು ರಾಜೇಂದ್ರ, ಅರಳಿಹಳ್ಳಿ ಬದ್ರಿನಾಥ್, ತೆಕ್ಕಲಕೋಟೆ ಶ್ರೀನಿವಾಸ (ಉಪಾಧ್ಯಕ್ಷರು), ಭೂಪಾಳ್ ಪ್ರಹ್ಲಾದ್, ರಮೇಶ್ ಗುಪ್ತಾ, ಗಂಗಾವತಿ ಸಂಜೀವ್ (ಸಹ ಕಾರ್ಯದರ್ಶಿಗಳು), ಸಿದ್ದಂಶೆಟ್ಟಿ ಭರ್ಮಣ್ಣ ಶೆಟ್ಟಿ (ಸಹ ಖಜಾಂಚಿ), 27 ಜನ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.