ADVERTISEMENT

ಕುರುಗೋಡು | ಹಿಂದೂ ಗಣಪತಿ ಶೋಭಾಯಾತ್ರೆ ಸೊಬಗು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:14 IST
Last Updated 8 ಸೆಪ್ಟೆಂಬರ್ 2025, 3:14 IST
ಕುರುಗೋಡಿನಲ್ಲಿ ಶನಿವಾರ ಜರುಗಿದ ಹಿಂದೂಮಹಾಗಣಪತಿ ಶೋಭಾಯಾತ್ರೆ ಗಮನಸೆಳೆಯಿತು
ಕುರುಗೋಡಿನಲ್ಲಿ ಶನಿವಾರ ಜರುಗಿದ ಹಿಂದೂಮಹಾಗಣಪತಿ ಶೋಭಾಯಾತ್ರೆ ಗಮನಸೆಳೆಯಿತು   

ಕುರುಗೋಡು: ಪಟ್ಟಣದ ತೇರಿನ ಮನೆಯ ಪಕ್ಕದ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ್ದ ಮೊದಲ ವರ್ಷದ ಹಿಂದೂ ಮಹಾಗಣಗತಿ ಶೋಭಾಯಾತ್ರೆ ಶನಿವಾರ ಅದ್ದೂರಿಯಾಗಿ ಜರುಗಿತು.

ದೊಡ್ಡವಸವೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆ ಸಾಗಿದ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಶೋಭಾಯಾತ್ರೆಯ ಸೊಬಗು ಕಣ್ತುಂಬಿಕೊಂಡರು. ಹಿಂದೂ ಮಹಾಗಣಪತಿಗೆ ಜಯಕರ ಕೂಗಿ ಭಕ್ತಿ ಸಮರ್ಪಿಸಿದರು.

ಶೋಭಾಯಾತ್ರೆಯಲ್ಲಿ ಸಮಾವೇಶಗೊಂಡಿದ್ದ ನೂರಾರು ಸಂಖ್ಯೆಯ ಯುವಕರು ಡಿಜೆ ಲಯಕ್ಕೆ ಹೆಜ್ಜೆಹಾಕಿ ನೃತ್ಯ ಮಾಡುತ್ತಿರುವುದು ಗಮನಸೆಳೆಯಿತು.

ADVERTISEMENT

ಸಂಜೆ 5ಕ್ಕೆ ಪ್ರಾರಂಭಗೊಂಡ ಶೋಭಾಯಾತ್ರೆ ಮಧ್ಯರಾತ್ರಿ 12 ಗಂಟೆಗೆ ಬಸವಪುರ ಗ್ರಾಮದ ಬಳಿ ಇರುವ ತುಂಗಭದ್ರಾ ಕೆಳಮಟ್ಟದ ಕಾಲುವೆ ತಲುಪಿತು. ನಂತರ ವಿಘ್ನನಿವಾರಕನನ್ನು ವಿಸರ್ಜನೆ ಮಾಡಲಾಯಿತು.

ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.