ಕುರುಗೋಡು: ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಟ್ರಾಕ್ಟರ್ ಬ್ಯಾಟರಿಗಳನ್ನು ಕಳುವು ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಕುರುಗೋಡಿನ ಯೇಸು ಸ್ವಾಮಿ ಮತ್ತು ಜಡೇಶ, ವದ್ದಟ್ಟಿ ಗ್ರಾಮದ ಶಿವಪ್ಪ ಮತ್ತು ಸಿದ್ದಮ್ಮನಹಳ್ಳಿ ಗಾಮದ ತಿಪ್ಪಣ್ಣ ಬಂಧಿತರು.
27 ಬ್ಯಾಟರಿ, 1 ಅಪ್ಪಿಆಟೋ, 2 ಮೋಟರ್ ಬೈಕ್ ಸೇರಿ ₹೬.೫೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ಶುಕ್ರವಾರ ರಾತ್ರಿ ಗಸ್ತು ನಡೆಸುತ್ತಿರುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.
ಗೆಣಿಕೆಹಾಳು, ಬಾದನಹಟ್ಟಿ ಮತ್ತು ಎಚ್.ವೀರಾಪುರ ಗ್ರಾಮಗಳಲ್ಲಿ ಬ್ಯಾಟರಿ ಕಳ್ಳತನವಾದ ಕುರಿತು ಕುರುಗೋಡು ಮತ್ತು ಸಿರಿಗೇರಿ ಪೊಲೀಸ್ ಠಾಣೆಗಳಲ್ಲಿ ತಲಾ ೩ ಪ್ರಕರಣ ದಾಖಲಾಗಿದ್ದವು. ಪ್ರಕರಣ ಪತ್ತೆಹಚ್ಚಲು ತಂಡ ಸಚಿಸಲಾಗಿತ್ತು.
ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ. ವಿಶ್ವನಾಥ ಕೆ.ಹಿರೇಗೌಡರ್, ಪಿಎಸ್‌ಐ ಸುಪ್ರಿತ್, ಮಹಿಳಾ ಪಿಎಸ್‌ಐ ಕರೆಮ್ಮ, ಸಿಬ್ಬಂದಿ ಶೇಕ್ಷಾವಲಿ, ಕುಮಾರಸ್ವಾಮಿ, ರಾಜಶೇಖರ, ವಿಜಯಕುಮಾರ್, ರೇವಣಶಿದ್ದೇಶ್ವರ ಆಂಜನೇಯ, ರಾಮಚಂದ್ರ, ಇರ್ಫಾನ್, ಪಕ್ಕೀರಪ್ಪ ಮತ್ತು ಶರಣಪ್ಪ ತಂಡ ಪ್ರಕರಣ ಪತ್ತೆಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.