ಕಿಷ್ಕಿಂದ ವಿವಿ
ಬಳ್ಳಾರಿ: ಕಿಷ್ಕಿಂದ ವಿಶ್ವವಿದ್ಯಾಲಯದ ಎಂಬಿಎ ಹಾಗೂ ಎಂಸಿಎ ಕೋರ್ಸ್‌ಗಳ ಮೊದಲ ತಂಡದ ವಿದ್ಯಾರ್ಥಿಗಳ ಪದವಿ ಪ್ರದಾನ ಮತ್ತು ಪ್ರಥಮ ಘಟಕೋತ್ಸವ ಇದೇ 24ರಂದು ನಡೆಯಲಿದೆ ಎಂದು ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾರಂಭಕ್ಕೆ ರಾಜ್ಯಪಾಲ ಥಾವರಚಂದ್ ಗೆಹೋಟ್ ಮುಖ್ಯ ಅತಿಥಿಯಾಗಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ವಿ ವಿಶೇಷ ಅತಿಥಿಯಾಗಿ, ಸಂಸದ ಜಗದೀಶ್ ಶೆಟ್ಟರ್, ಶಾಸಕರಾದ ಬಿ.ಎಂ. ನಾಗರಾಜ, ಶಾಸಕ ಬಾದರ್ಲಿ ಹಂಪನಗೌಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.
ರಾಯಚೂರಿನ ವಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗೆ ಗೌರವ ಡಾಕ್ಟರೇಟ್ ಪದವಿ (ಹಾನರಿಸ್ ಕಾಸಾ) ಪ್ರದಾನ ಮಾಡಲಾಗುತ್ತದೆ ಎಂದೂ ಅವರು ತಿಳಿಸಿದರು.
ಎಂಬಿಎ ವಿಭಾಗದಲ್ಲಿ 9.33 ಸಿಜಿಪಿಎ ಪಡೆದಿರುವ ಶಬಾನಾ ಅವರಿಗೆ ಚಿನ್ನದ ಪದಕ, ಸೌಗಂಧಿಕಾ ಲಕ್ಷ್ಮಿ (9.27 ಸಿಜಿಪಿಎ)ಗೆ ಬೆಳ್ಳಿಯ ಪದಕ, ಎಂಸಿಎ ವಿಭಾಗದ ಸಜ್ಜ ಜಗತಿ (9.82 ಸಿಜಿಪಿಎ) ಚಿನ್ನದ ಪದಕ, ಸಂಧ್ಯಾ ಜಿ (9.66 ಸಿಜಿಪಿಎ) ಬೆಳ್ಳಿ ಪದಕ ಪಡೆಯಲಿದ್ದಾರೆ ಎಂದರು.
ಕುಲಾಧಿಪತಿ ಯಶವಂತ್ ಭೂಪಾಲ್, ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕುಲಸಚಿವ ಯು. ಈರಣ್ಣ, ಕುಲಸಚಿವ (ಮೌಲ್ಯಮಾಪನ) ರಾಜು ಜಾಡರ್, ಮಹಿಪಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.