ADVERTISEMENT

ಕುಂದು ಕೊರತೆ | ‘ಅವ್ಯವಸ್ಥೆಯ ಆಗರ ತಿರುಮಲ ನಗರ’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 9:39 IST
Last Updated 28 ಆಗಸ್ಟ್ 2019, 9:39 IST
ಹೊಸಪೇಟೆಯ ತಿರುಮಲ ನಗರದಲ್ಲಿ ಚರಂಡಿಯ ಹೊಲಸು ರಸ್ತೆ ಮೇಲೆ ಹರಿದಾಡುತ್ತಿದ್ದು, ಜನ ಅದರಲ್ಲಿಯೇ ಓಡಾಡುವಂತಾಗಿದೆ
ಹೊಸಪೇಟೆಯ ತಿರುಮಲ ನಗರದಲ್ಲಿ ಚರಂಡಿಯ ಹೊಲಸು ರಸ್ತೆ ಮೇಲೆ ಹರಿದಾಡುತ್ತಿದ್ದು, ಜನ ಅದರಲ್ಲಿಯೇ ಓಡಾಡುವಂತಾಗಿದೆ   

ಹೊಸಪೇಟೆ: ಇಲ್ಲಿನ ತಿರುಮಲ ನಗರದಲ್ಲಿ ಮೂಲಸೌಕರ್ಯ ಸಂಪೂರ್ಣ ಮರೀಚಿಕೆಯಾಗಿದ್ದು, ಸ್ಥಳೀಯರು ನರಕದಲ್ಲಿ ಬದುಕು ನಡೆಸುವಂತಾಗಿದೆ.

ಬಡಾವಣೆಯ ರಸ್ತೆ ಸಂಪೂರ್ಣ ಹಾಳಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಹೊಲಸು ರಸ್ತೆಯ ಮೇಲೆ ಹರಿದಾಡುತ್ತಿದ್ದು, ಎಲ್ಲೆಡೆ ದುರ್ಗಂಧ ಹರಡಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ. ಮಕ್ಕಳು, ಹಿರಿಯ ನಾಗರಿಕರು ರಾತ್ರಿ ಹೊತ್ತಿನಲ್ಲಿ ಓಡಾಡಲು ಕಷ್ಟವಾಗುತ್ತಿದೆ.

ಅಮೃತ ಯೋಜನೆಯಡಿ ನಗರಕ್ಕೆ ಕೋಟ್ಯಂತರ ರೂಪಾಯಿ ಮಂಜೂರಾಗಿದೆ. ಆದರೆ, ದಲಿತರು, ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ತಿರುಮಲ ನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು.

ADVERTISEMENT

ಸಿ. ಸೋಮಶೇಖರ್‌ ಬಣ್ಣದಮನೆ, ಈಶ್ವರ, ವೆಂಕಟೇಶ್‌, ರಾಜಶೇಖರ್‌, ವಸಂತಪ್ಪ, ಕೃಷ್ಣ, ಪರಮೇಶ, ಈಸಪ್ಪ, ರಾಜ, ಸೀನ, ತಿರುಮಲ ನಗರ ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.