ADVERTISEMENT

ಸಿರುಗುಪ್ಪ: ‘ಗ್ರಂಥಾಲಯ ಸಮುದಾಯದ ಜ್ಞಾನ ಕೇಂದ್ರ’

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:21 IST
Last Updated 7 ಜೂನ್ 2025, 14:21 IST
ಸಿರುಗುಪ್ಪ ನಗರದ ತಾಲ್ಲೂಕು ಮೈದಾನದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿದರು
ಸಿರುಗುಪ್ಪ ನಗರದ ತಾಲ್ಲೂಕು ಮೈದಾನದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿದರು   

ಸಿರುಗುಪ್ಪ: ನೂತನ ಗ್ರಂಥಾಲಯವು ಒಂದು ಸಮುದಾಯದ ಜ್ಞಾನದ ಪ್ರಮುಖ ಕೇಂದ್ರವಾಗಿದೆ. ಇದು ಓದುಗರಿಗೆ ಶಿಕ್ಷಣ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯಂತ ನೂತನ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಈ ಕಟ್ಟಡದಲ್ಲಿ ಅಳವಡಿಸಲಾಗುವುದು ಎಂದು ಶಾಸಕ ಬಿ.ಎಂ.ನಾಗರಾಜ ಹೇಳಿದರು.

ನಗರದ ತಾಲ್ಲೂಕು ಮೈದಾನದಲ್ಲಿ 2024-25ನೇ ಸಾಲಿನ ಕೆ.ಕೆ.ಆರ್‌.ಡಿ.ಬಿ. ಯೋಜನೆ ಅನುದಾನ ಅಡಿಯಲ್ಲಿ ₹ 75 ಲಕ್ಷ ವೆಚ್ಚದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿ ಮಾತನಾಡಿದರು.

ನಗರಸಭೆ ಅಧ್ಯಕ್ಷ ಬಿ.ರೇಣುಕಮ್ಮ ವೆಂಕಟೇಶ್, ಉಪಾಧ್ಯಕ್ಷ ಯಶೋಧ ಚಿದಾನಂದಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ಲೋಕೋಪಯೋಗಿ ಇಲಾಖೆಯ ಎ.ಇ.ಇ.ಚನ್ನನಗೌಡ, ನಗರಸಭೆ ಮಾಜಿ ಅಧ್ಯಕ್ಷ ಮುತ್ತಾಲಯ್ಯ ಶೆಟ್ಟಿ, ನಗರಸಭೆ ಸದಸ್ಯರಾದ ಕಾಯಿಪಲ್ಲೆ ನಾಗರಾಜ್, ಹೆಚ್. ಗಣೇಶ್, ಮುಖಂಡರುಗಳಾದ ಕೃಷ್ಣಪ್ಪ ಪರಶುರಾಮ್, ಜಾಜಿ ರಾಮಣ್ಣ, ಅಡಿವೆಪ್ಪ, ಗೊರವರ ಶ್ರೀನಿವಾಸ್, ಬಿ.ಉಮೇಶ್ ಗೌಡ, ಕೋಟಿರೆಡ್ಡಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.