ADVERTISEMENT

ಬಿಜೆಪಿಗೆ ಪಾಠ ಕಲಿಸಿದ ಲಿಂಗಾಯತರು: ಜಗದೀಶ್‌ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 5:05 IST
Last Updated 14 ಆಗಸ್ಟ್ 2023, 5:05 IST
ಜಗದೀಶ್‌ ಶೆಟ್ಟರ್‌
ಜಗದೀಶ್‌ ಶೆಟ್ಟರ್‌   

ಬಳ್ಳಾರಿ: ‘ರಾಜಕೀಯವಾಗಿ ನನಗೆ ಅನ್ಯಾಯ ಮಾಡಿದ ಪಕ್ಷಕ್ಕೆ ಲಿಂಗಾಯತ ಸಮಾಜ ತಕ್ಕ ಪಾಠ ಕಲಿಸಿದೆ’ ಎಂದು ವಿಧಾನಪರಿಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ಬಸವ ಭವನದಲ್ಲಿ ಭಾನುವಾರ ನಡೆದ ಬಣಜಿಗ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಜಗದೀಶ್‌ ಶೆಟ್ಟರ್‌ಗೆ ಆದ ಅ‌ನ್ಯಾಯ ಎಲ್ಲರಿಗೂ ಗೊತ್ತಿದೆ. ನೀವು ಚುನಾವಣೆಯಲ್ಲಿ ಕೊಟ್ಟ ಉತ್ತರ ಯಾರಿಗೆ ತಲುಪಬೇಕೋ ಅವರಿಗೆ ತಲುಪಿದೆ. ನಿಮ್ಮ ಹೊಡೆತವನ್ನು ಅವರು (ಬಿಜೆಪಿ ನಾಯಕರು) ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂಬ ಬಗ್ಗೆ  ಇನ್ನೂ ಚರ್ಚೆಗಳು ಆಗಿಲ್ಲ’ ಎಂದು ಶೆಟ್ಟರ್‌ ಸ್ಪಷ್ಟಪಡಿಸಿದರು. 

ADVERTISEMENT

‘ಈ ತಿಂಗಳ 2ರಂದು ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ 35 ಮುಖಂಡರು ಭಾಗವಹಿಸಿದ್ದೆವು. ಅಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.