ಗಣೇಶ ಮೂರ್ತಿ
- ಪ್ರಜಾವಾಣಿ ಚಿತ್ರ
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಮೂಲಗಳ ಸಂರಕ್ಷಣೆಯ ಉದ್ದೇಶದಿಂದ ನಗರದಲ್ಲಿ ತುಂಗಭದ್ರಾ ಕಾಲುವೆಯು ಹಾದು ಹೋಗುವ ವಿವಿಧ ಸ್ಥಳಗಳಲ್ಲಿಯೇ ಮಾತ್ರವೇ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸ್ಥಳಗಳು: ಬೆಂಗಳೂರು ರಸ್ತೆ, ತಾಳೂರು ರಸ್ತೆ, ಕಪ್ಪಗಲ್ಲು ರಸ್ತೆ, ಅಲ್ಲೀಪುರ (ಹೊಸಪೇಟೆ ರಸ್ತೆ), ಬೆಳಗಲ್ಲು ರಸ್ತೆ (ಡಿ.ಸಿ ನಗರ), ಸಿರುಗುಪ್ಪ ರಸ್ತೆಯ ಹವಂಭಾವಿ, ಬಂಡಿಹಟ್ಟಿಯ ಆಲದಹಳ್ಳಿ ರಸ್ತೆ ಮತ್ತು ಭತ್ರಿ.
ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಓ.ಪಿ)ನಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ, ಬಳಕೆ ಮತ್ತು ರಾಸಾಯನಿಕ ಬಣ್ಣಗಳ ಗಣೇಶ ಮೂರ್ತಿಯ ತಯಾರಿಕೆ ನಿಷೇಧಿಸಲಾಗಿದೆ. ಮಣ್ಣಿ ಮೂರ್ತಿ ಹಾಗೂ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸಬೇಕು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.