ತೆಕ್ಕಲಕೋಟೆ: ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲೊಕೇಷನ್ ಟ್ಯಾಗ್ ಗೊಂದಲದಿಂದಾಗಿ ಶಿಕ್ಷಕ ಕಾಡಿನ ಕುರಿಹಟ್ಟಿಗೆ ತಲುಪಿದ ಘಟನೆ ಗುರುವಾರ ನಡೆದಿದೆ.
ಇದರಿಂದ ಉಪ್ಪಾರ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪ ಎಸ್. ಗೊಂದಲಕ್ಕೆ ಒಳಗಾದವರು.
ಪಟ್ಟಣದ ಹೊರವಲಯದ ದೇವಿನಗರದ19ನೇ ವಾರ್ಡಿನ ರೇವಣಸಿದ್ದಪ್ಪ ಬಡಾವಣೆಗೆ ಲೊಕೇಷನ್ ಟ್ಯಾಗ್ ಮೂಲಕ ತೆರಳಿದ ಶಿಕ್ಷಕ ಅಲ್ಲಿನ ಎರಡು ಮನೆಗಳ ನಂತರ ಮುಂದಿನ ಮನೆಗೆ ಲೊಕೆಷನ್ ಹಾಕಿದಾಗ 2-3 ಕಿಮೀ ದೂರದ ಹೊಲಗದ್ದೆಗಳ ನಡುವಿನ ಕುರಿ ಹಟ್ಟಿಗೆ ಕರೆದುಕೊಂಡು ಹೋಗಿದೆ.
ಅಲ್ಲಿ ಯಾವುದೇ ಯುಎಚ್ ಐಡಿ ಅಥವಾ ಯಾರೂ ವಾಸ ಇಲ್ಲದ ಕಾರಣ ವಾಪಸ್ ಬಂದಿದ್ದಾರೆ. ತಾವು ಅನುಭವಿಸಿದ ಮುಜುಗರ ಕುರಿತು ಫೋಟೊ ಮೂಲಕ ಹಂಚಿಕೊಂಡಿದ್ದು, ಅತಿಹೆಚ್ಚು ಹಂಚಿಕೆಯಾಗಿದೆ.
'ಮೂರು ಕಿಮೀ ನಡೆದುಕೊಂಡು ಹೋದರೆ ಅಲ್ಲಿ ಕುರಿಹಟ್ಟಿ ಇದೆ. ಮ್ಯಾಪಿಂಗ್ ಸಮಸ್ಯೆಯಿಂದ ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಮುಜುಗರ ಪಡುವಂತಾಗಿದೆ’ ಎಂದು ಶಿಕ್ಷಕ ಮಂಜಪ್ಪ ತಿಳಿಸಿದರು.
ಸಮೀಕ್ಷೆಯ 1.34 ಆ್ಯಪ್ ನ ಹೊಸ ಆವೃತ್ತಿಯ ತಾಂತ್ರಿಕ ಸಮಸ್ಯೆಯಿಂದಾಗಿ ಈ ಗೊಂದಲ ಉಂಟಾಗಿರಬಹುದು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆಮಲ್ಲಿಕಾರ್ಜುನ ಕೆ. ಸಿರುಗುಪ್ಪ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.