ADVERTISEMENT

ಲೋಕಸಭೆ ಉಪ‌ಚುನಾವಣೆ: ಪಕ್ಷೇತರರಾಗಿ ಡಾ.ಟಿ.ಆರ್.ಶ್ರೀನಿವಾಸ್ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 9:05 IST
Last Updated 15 ಅಕ್ಟೋಬರ್ 2018, 9:05 IST
ಲೋಕಸಭೆ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ.ಟಿ.ಆರ್‌.ಶ್ರೀನಿವಾಸ್
ಲೋಕಸಭೆ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ.ಟಿ.ಆರ್‌.ಶ್ರೀನಿವಾಸ್   

ಬಳ್ಳಾರಿ: ಲೋಕಸಭೆ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಟಿ.ಆರ್‌.ಶ್ರೀನಿವಾಸ್ ನಗರದಲ್ಲಿ ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ ಮನೋಹರ ಅವರಿಗೆ ನಾಮಪತ್ರ ಸಲ್ಲಿಸಿದರು.

ನಗರದ ‌ದುರ್ಗಮ್ಮ ಗುಡಿಯಲ್ಲಿ‌ ಪೂಜೆ ಬಳಿಕ‌ ಜಿಲ್ಲಾಧಿಕಾರಿ ಕಚೇರಿವರೆಗೂ ಬೆಂಬಲಿಗರೊಂದಿಗೆ ನಡೆದು ‌ಬಂದ ಅವರು, ಮಧ್ಯಾಹ್ನ1.55 ರ ವೇಳೆಗೆ‌ ನಾಮಪತ್ರ ಸಲ್ಲಿಸಿದರು.

ಬಿಜೆಪಿ‌ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕರಾಗಿದ್ದ ಅವರು, ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಶಾಸಕ ಬಿ.ಶ್ರೀರಾಮುಲು‌ ಸಹೋದರಿ ಜೆ.ಶಾಂತಾ ಅವರನ್ನು‌ ಪಕ್ಷ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದ ಬಳಿಕ ತಮ್ಮ ಸ್ಥಾನಕ್ಕೆ‌ ರಾಜೀನಾಮೆ ನೀಡಿದ್ದರು.

ADVERTISEMENT

ಶ್ರೀರಾಮುಲು‌ ಕುಟುಂಬ ರಾಜಕಾರಣದಿಂದ ಪಕ್ಷದ ‌ನಿಷ್ಠಾವಂತರಿಗೆ‌ ಅನ್ಯಾಯವಾಗಿದೆ ಎಂದು ‌ಭಾನುವಾರ ಸುದ್ದಿಗೋಷ್ಟಿಯಲ್ಲಿ‌ ಅಸಮಾಧಾನ ವ್ಯಕ್ತಪಡಿಸಿದ್ದರು.

ವೈದ್ಯರ‌ ಸ್ಪರ್ಧೆಯಿಂದ ಪಕ್ಷದ ಮೇಲೆ ಯಾವ‌ ಪರಿಣಾಮ ‌ಉಂಟಾಗಬಹುದು ಎಂಬುದನ್ನು ಕಾದು‌ ನೋಡಬೇಕಾಗಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.