ರೋಣ: ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಅಸೂಟಿ, ಯಾವಗಲ್ ಸೇರಿದಂತೆ ನರಗುಂದ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಮಾಜಿ ಸಚಿವ ನರಗುಂದ ಶಾಸಕ ಸಿ.ಸಿ.ಪಾಟೀಲ ಭೇಟಿ ನೀಡಿ ಗ್ರಾಮಸ್ಥರಿಗೆ ಪ್ರವಾಹ ಸಂದರ್ಭ ಎದುರಿಸಲು ಚರ್ಚಿಸಿದರು.
ಭೇಟಿಯ ವೇಳೆ ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ಗಮನಹರಿಸಲು ಹಾಗೂ ಜನತೆಗೆ ಯಾವುದೇ ಅನಾನುಕೂಲವಾಗದ ರೀತಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರೋಣ ತಾಪಂ ಇಒ ಚಂದ್ರಶೇಖರ ಕಂದಕೂರ ಹಾಗೂ ರೋಣ ತಹಶೀಲ್ದಾರ್ ನಾಗರಾಜ.ಕೆ ಅವರಿಗೆ ಸೂಚಿಸಿದ ಶಾಸಕ ಪಾಟೀಲ ಪ್ರವಾಹ ಪರಿಸ್ಥಿತಿ ಕುರಿತು ಜನರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಅಸೂಟಿ ಗ್ರಾಮದ ಗ್ರಾಮಸ್ಥರು ಹಳ್ಳದ ಹೂಳು ತೆಗೆಯಲು ಹಾಗೂ ಹಳ್ಳದ ನೀರು ಕಾಲುವೆಗಳಿಗೆ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರನ್ನು ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಪಾಟೀಲ ಈ ಕುರಿತು ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾರತ್.ಎಸ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸೂಚಿಸಿದರು.
ಜೊತೆಗೆ ಅಸೂಟಿ ಗ್ರಾಮದ ಮನೆಗಳನ್ನು ಸ್ಥಳಾಂತರಗೊಳಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಪ್ರಾಮಾಣಿಕವಾಗಿ ಜನರ ಸಮಸ್ಯೆ ಸ್ಪಂದಿಸುವುದಾಗಿ ಜನರಿಗೆ ಭರವಸೆ ನೀಡಿದರು.
ಎಸ್.ಸಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಸ್ತೆ ದುರಸ್ಥಿಗೊಳಿಸಲು ತಾಪ ಕಾರ್ಯನಿರ್ವಾಹಕಾಧಿಕಾರಿ ಚಂದ್ರಶೇಖರ ಕಂದಕೂರ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಉಮೇಶಗೌಡ ಪಾಟೀಲ, ಲಿಂಗರಾಜ ಪಾಟೀಲ, ಸಿದ್ದುಗೌಡ ಪಾಟೀಲ, ಸೋಮು ಚರೇದ, ಈರಪ್ಪ ತಾಳಿ, ವೀರೇಶ ದಿಂಡೂರ, ಸೋಮನಗೌಡ ಹುಡೇದ, ಶರಣು ಬರಶೆಟ್ಟಿ, ಈ ಸಿ.ಪಿ.ಐ ಸಿದ್ದಪ್ಪ ಬಿಳಗಿ, ಪಿ.ಎಸ್.ಐ ಪ್ರಕಾಶ ಬಾಣಕಾರ, ಜಿಪಂ ಇಂಜನೀಯರ್ ವಿಜಯಗೌಡ ಗೌಡರ, ಕೃಷಿ ಅಧಿಕಾರಿ ರವೀಂದ್ರಗೌಡ ಪಾಟೀಲ, ಸಾವಿತ್ರಿ ಶಿವನಗೌಡ್ರ, ಪಿಡಿಓ ಬಸವರಾಜ ಗಿರಿತಮ್ಮಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.