ತೆಕ್ಕಲಕೋಟೆ: ಸಮೀಪದ ದರೂರು ಗ್ರಾಮದಲ್ಲಿ ಗುರುವಾರ ಸಂಜೆ ಬೀಸಿದ ಗಾಳಿಗೆ ಬೃಹತ್ ಗಾತ್ರದ ಮೊಬೈಲ್ ಗೋಪುರ ಧರೆಗೆ ಉರುಳಿದೆ.
ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ್ಗೆ ತುಂತುರು ಹನಿ ಹಾಕುತ್ತಿದೆ. ಆದರೆ ಗುರುವಾರ ಸಂಜೆ ಬೀಸಿದ ಗಾಳಿ ಸಹಿತ ಮಳೆಗೆ ಮೊಬೈಲ್ ಟವರ್ ಕಾಂಕ್ರಿಟ್ ಫೂಟಿಂಗ್ ಸಹಿತ ಕಿತ್ತು ಶೆಡ್ ಹಾಗೂ ಮನೆಗಳ ಮೇಲೆ ಬಿದ್ದಿದೆ. ಟವರ್ ಬಿದ್ದ ರಭಸಕ್ಕೆ ನಾಲ್ಕು ವಿದ್ಯುತ್ ಕಂಬಗಳು ಮುರಿದಿದ್ದು, ಒಂದು ಮನೆ, ಗೂಡಂಗಡಿ ಹಾಗೂ ಟವರ್ ಟಿ.ಸಿ ಜಖಂಗೊಂಡಿದೆ. ಗೂಡಂಗಡಿಯಲ್ಲಿ ಇದ್ದ ನಾಗರಾಜ ಎನ್ನುವವರಿಗೆ ಗಾಯಗಳಾಗಿವೆ.
ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.