ADVERTISEMENT

ಹೊಸಪೇಟೆ | ಚೆಕ್‌ಪೋಸ್ಟ್‌ನಲ್ಲಿ ₹ 12 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 17:18 IST
Last Updated 3 ಡಿಸೆಂಬರ್ 2019, 17:18 IST
ಕಾರಿನಿಂದ ವಶಪಡಿಸಿಕೊಂಡ ₹12 ಲಕ್ಷ ನಗದು
ಕಾರಿನಿಂದ ವಶಪಡಿಸಿಕೊಂಡ ₹12 ಲಕ್ಷ ನಗದು   

ಹೊಸಪೇಟೆ: ತಾಲ್ಲೂಕಿನ ಭುವನಹಳ್ಳಿ ಚೆಕ್‌ಪೋಸ್ಟ್‌ ಬಳಿ ಚುನಾವಣಾ ಆಯೋಗದ ಸಿಬ್ಬಂದಿ ಮಂಗಳವಾರ ಸಂಜೆ ₹12 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

‘ಜಿಂದಾಲ್‌ನಿಂದ ನಗರದ ಕಡೆಗೆ ಬರುತ್ತಿದ್ದ ಕಾರು ತಡೆದು ಪರಿಶೀಲನೆ ನಡೆಸಿದಾಗ ₹12 ಲಕ್ಷ ನಗದು ಪತ್ತೆಯಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

‘ಈ ನಗದು ಯಾರದ್ದು, ಎಲ್ಲಿಗೆ ಸಾಗಿಸುತ್ತಿದ್ದರು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.