ADVERTISEMENT

ಕಂಪ್ಲಿ | ಟ್ರ್ಯಾಕ್ಟರ್ ಚಾಲಕರಿಗೆ ಕೋತಿ ದಾಳಿಯ ಭೀತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 18:29 IST
Last Updated 21 ಆಗಸ್ಟ್ 2023, 18:29 IST
ಕೋತಿ ( ಸಾಂಕೇತಿಕ ಚಿತ್ರ)
ಕೋತಿ ( ಸಾಂಕೇತಿಕ ಚಿತ್ರ)   

ಕಂಪ್ಲಿ: ತಾಲ್ಲೂಕಿನ ಬಳ್ಳಾಪುರ ಗ್ರಾಮದಲ್ಲಿ ಕರಿ ಮೂತಿ ಮುಷ್ಯಾ(ಮಂಗ) ಹಾವಳಿಯಿಂದ ಟ್ರ್ಯಾಕ್ಟರ್ ಚಾಲಕರು ಭಯಭೀತರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ಈ ಮಂಗ ಟ್ರ್ಯಾಕ್ಟರ್ ಶಬ್ಧ ಕೇಳಿದರೆ ಸಾಕು ನೇರವಾಗಿ ಚಾಲಕರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತದೆ.

ಈಗಾಗಲೇ ಗ್ರಾಮದ ಟ್ರ್ಯಾಕ್ಟರ್ ಚಾಲಕರಾದ ಕೋರಿ ಬೈರಪ್ಪ, ಅರಕೇರಿ ಕರಿಯಪ್ಪ ಮತ್ತು ಉಪ್ಪಾರು ತಿಮ್ಮಪ್ಪ ಅವರ ಮೇಲೆ ದಾಳಿ ನಡೆಸಿದ ಕೋತಿ ಕಚ್ಚಿ ಗಾಯಗೊಳಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ADVERTISEMENT

ಸುತ್ತಲೂ ಮುಂಗಾರು ಹಂಗಾಮು ಭತ್ತ ನಾಟಿ ಕಾರ್ಯ ಭರದಿಂದ ನಡೆದಿದ್ದು, ಗ್ರಾಮದ 20 ಟ್ರ್ಯಾಕ್ಟರ್‌ಗಳು ಸೇರಿದಂತೆ ಅಕ್ಕಪಕ್ಕದ ಊರಿನ ಟ್ರ್ಯಾಕ್ಟರ್‌ಗಳು ನಮ್ಮೂರ ಮುಖಾಂತರ ಸಾಗುತ್ತವೆ. ಗ್ರಾಮದಲ್ಲಿ ಏಕಾಏಕಿ ಕೋತಿ ದಾಳಿ ನಡೆಸುವುದನ್ನು ಅರಿತಿರುವ ಚಾಲಕರು ಸಾಗುವಾಗ ಬಡಿಗೆ, ಬಿದಿರು, ಕಟ್ಟಿಗೆ ತಮ್ಮ ಜೊತೆಗೆ ಹಿಡಿದು ಸಾಗುವುದು ಸಾಮಾನ್ಯವಾಗಿದೆ.

ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುವಾಗ ಆಕಸ್ಮಿಕ ಕೋತಿ ದಾಳಿ ನಡೆಸಿ ಅಪಘಾತ ಸಂಭವಿಸಿದಲ್ಲಿ ಯಾರು ಹೊಣೆ. ಟ್ರ್ಯಾಕ್ಟರ್ ಚಾಲಕರನ್ನೇ ಗುರಿಯಾಗಿರಿಸಿಕೊಂಡಿರುವ ಈ ಕೋತಿಯನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಅಧಿಕಾರಿಗಳು ಸೆರೆ ಹಿಡಿದು ದೂರ ಸಾಗಿಸುವಂತೆ ಗ್ರಾಮಸ್ಥರಾದ ಹೊಂಬಳದ ಗಾದಿಲಿಂಗಪ್ಪ, ಮುಸಿ ಪಕ್ಕೀರಪ್ಪ, ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.