ADVERTISEMENT

ಕೋವಿಡ್‌ನಲ್ಲೂ ನಿಲ್ಲದ ಕ್ಷಯರೋಗಿಗಳ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 8:38 IST
Last Updated 19 ಮೇ 2021, 8:38 IST
ಹೊಸಪೇಟೆಯ ಟಿ.ಬಿ. ಘಟಕದ ವೈದ್ಯರು, ಸಿಬ್ಬಂದಿ ಬುಧವಾರ ಕ್ಷಯ ರೋಗಿಗಳೊಂದಿಗೆ ದೂರವಾಣಿಯಲ್ಲಿ ಆಪ್ತ ಸಮಾಲೋಚನೆ ನಡೆಸಿದರು
ಹೊಸಪೇಟೆಯ ಟಿ.ಬಿ. ಘಟಕದ ವೈದ್ಯರು, ಸಿಬ್ಬಂದಿ ಬುಧವಾರ ಕ್ಷಯ ರೋಗಿಗಳೊಂದಿಗೆ ದೂರವಾಣಿಯಲ್ಲಿ ಆಪ್ತ ಸಮಾಲೋಚನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಕೋವಿಡ್‌ ಇರುವುದರಿಂದ ಕ್ಷಯರೋಗಿಗಳ ಮನೆಗೆ ಹೋಗಿ ಆಪ್ತ ಸಮಾಲೋಚನೆ ನಡೆಸುವುದರ ಬದಲು ಅವರೊಂದಿಗೆ ದೂರವಾಣಿ ಮೂಲಕ ನಿತ್ಯ ಸಮಾಲೋಚನೆ ನಡೆಸಲಾಗುತ್ತಿದೆ.

ಸ್ಥಳೀಯ ಟಿ.ಬಿ. ಘಟಕದ ವತಿಯಿಂದ ಬುಧವಾರ ಕ್ಷಯರೋಗಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಯಾವುದೇ ಹಂತದಲ್ಲಿ ಚಿಕಿತ್ಸೆ ನಿಲ್ಲಿಸಬಾರದು. ಪ್ರಾಥಮಿಕ ಹಂತದ ಚಿಕಿತ್ಸೆ ಮುಗಿದ ನಂತರ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎರಡು ತಿಂಗಳಿಗೆ ಆಗುವಷ್ಟು ಔಷಧ ಮುಂಚಿತವಾಗಿ ಪಡೆಯುವುದು, ಕೋವಿಡ್‌ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಕ್ಷಯ ರೋಗಿಗಳು ಯಾವುದೇ ಕಾರಣಕ್ಕೂ ಹೊರಬರಬಾರದು. ಸದಾ ಮಾಸ್ಕ್‌ ಧರಿಸಿಕೊಂಡು, ಅಂತರ ಕಾಪಾಡಿಕೊಂಡು ಇರಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಕ್ಷಯ ರೋಗ ಮೇಲ್ವಿಚಾರಕ ಕಾಸಿಂ ಸಾಬ್‌, ಮೇಲ್ವಿಚಾರಕ ಚಂದ್ರಪ್ಪ, ಟಿ.ಬಿ.ಎಚ್‌.ವಿ. ಗವಿಸಿದ್ದಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಟಿ. ಭಾಸ್ಕರ್‌, ಆರೋಗ್ಯ ಅಧಿಕಾರಿ ಧರ್ಮನಗೌಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.