ADVERTISEMENT

ಡಿ.24ರಿಂದ ನೀನಾಸಂ ರಂಗತೋರಣ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 6:11 IST
Last Updated 22 ಡಿಸೆಂಬರ್ 2018, 6:11 IST
   

ಬಳ್ಳಾರಿ: ನಗರದ ಬಯಲು ರಂಗಮಂದಿರದಲ್ಲಿ ಡಿ.24 ರಿಂದ ಮೂರು ದಿನಗಳ ಕಾಲ ನೀನಾಸಂ-ರಂಗತೋರಣ ನಾಟಕೋತ್ಸವ ನಡೆಯಲಿದೆ ಎಂದು ರಂಗತೋರಣ ‌ಕಾರ್ಯದರ್ಶಿ ಪ್ರಭುದೇವ‌ ಕಪ್ಪಗಲ್ಲು‌ ತಿಳಿಸಿದರು.

ಮೊದಲ ‌ದಿನ ನೀನಾಸಂ ನಾಟಕ ಆಶ್ಚರ್ಯ‌ ಚೂಡಾಮಣಿ, ಎರಡನೇ ದಿನ ಸೇತುಬಂಧನ ಹಾಗೂ ಮೂರನೇ ‌ದಿನ ರಂಗತೋರಣ ನಾಟಕ ದೂರ‌ದೇಶದ ಹಕ್ಕಿ‌‌ನಾಟಕ ಪ್ರದರ್ಶನ ನಡೆಯಲಿದೆ ಎಂದು ‌ನಗರದಲ್ಲಿ‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ಸವ ಈಗಾಗಲೇ ಶುಕ್ರವಾರದಿಂದ ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ‌ ಆರಂಭವಾಗಿದ್ದು,ಶ್ರೀಧರ‌ಗಡ್ಡೆ, ಬಳ್ಳಾರಿ‌ ನಗರದ ಪ್ಯುಪಿಟಲ್‌ಟ್ರೀ ಶಾಲೆ, ಸಂಡೂರು ತಾಲ್ಲೂಕಿನ ತೋರಣಗಲ್ಲು, ಸಿರುಗುಪ್ಪ‌ ತಾಲ್ಲೂಕಿನ ಸಿರಿಗೇರಿ, ಸಿರುಗುಪ್ಪ ಪಟ್ಟಣ ಹಾಗೂ ಹಡಗಲಿಯಲ್ಲೂ ನಾಟಕೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಜೋಳದರಾಶಿ‌ ದೊಡ್ಡನಗೌಡ ಪ್ರತಿಷ್ಠಾನದ ಬಿ.ಸಿದ್ದನಗೌಡ, ರಾಮೇಶ ಟ್ರಸ್ಟ್ನ ಕೆ.ಪೊಂಪನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.