ADVERTISEMENT

ನಿಟ್ಟೂರು– ಸಿಂಗಾಪುರ ಸೇತುವೆ ಕಾಮಗಾರಿ: ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:17 IST
Last Updated 10 ಮಾರ್ಚ್ 2025, 14:17 IST
ಬಿ.ಎಂ.ನಾಗರಾಜ
ಬಿ.ಎಂ.ನಾಗರಾಜ   

ತೆಕ್ಕಲಕೋಟೆ: ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿಟ್ಟೂರು– ಸಿಂಗಾಪುರ ಸೇತುವೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಆರಂಭಿಸುವ ಕುರಿತು ಶಾಸಕ ಬಿ.ಎಂ.ನಾಗರಾಜ ಸೋಮವಾರ ಬೆಂಗಳೂರಿನ ವಿಧಾನಸೌಧದ ಅಧಿವೇಶನದಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಪ್ರಶ್ನಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು.

‘ಸಿರಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಿಟ್ಟೂರು ಮತ್ತು ಸಿಂಧನೂರು ತಾಲ್ಲೂಕು ಸಿಂಗಾಪುರ ಗ್ರಾಮದ ಮಧ್ಯ ಬರುವ ತುಂಗಭದ್ರ ನದಿಗೆ ಸೇತುವೆ ನಿರ್ಮಾಣದ ಕುರಿತು ಸರ್ಕಾರದ ಗಮನಕ್ಕೆ ಬಂದಿದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

ಸೇತುವೆ ನಿರ್ಮಾಣದಿಂದಾಗಿ ಗಂಗಾವತಿಯಿಂದ ಸಿರುಗುಪ್ಪ ಪಟ್ಟಣ (ಗಂಗಾವತಿ– ಕೊಪ್ಪಳ– ಹುಬ್ಬಳ್ಳಿ– ಬೆಳಗಾವಿ– ಅಂಕೋಲಾ) ಸುಮಾರು 50ಕಿ.ಮೀ ದೂರದ ಪ್ರಯಾಣವು ಕಡಿಮೆಯಾಗುತ್ತದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ‘ಈ ಯೋಜನೆಗೆ ರಾಜ್ಯ ಸರ್ಕಾರದಿಂದ ₹6.50 ಕೋಟಿ ಭೂಸ್ವಾಧೀನ ಮೊತ್ತವನ್ನು ರೇಖಾ ಅಂದಾಜು ಪಟ್ಟಿ ಸರ್ಕಾರದಲ್ಲಿ ಸ್ವೀಕೃತವಾಗಿದ್ದು, ಪರಿಶೀಲನೆಯಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.