ಬಂಧನ (ಸಾಂದರ್ಭಿಕ ಚಿತ್ರ)
ತೆಕ್ಕಲಕೋಟೆ: ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ನಂತರ ಪೆರೋಲ್ ಮೇಲೆ ರಜೆಗೆ ತೆರಳಿ ನಾಪತ್ತೆಯಾಗಿದ್ದ ಕೈದಿ, ಪಟ್ಟಣದ ಕೊರವರ ನಾಗೇಶ ಅಲಿಯಾಸ್ ನಾಗಪ್ಪನನ್ನು ಮೂರು ವರ್ಷಗಳ ನಂತರ ಮತ್ತೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2012ರಲ್ಲಿ ಬಂಧಿತನಾಗಿದ್ದ ನಾಗಪ್ಪ, 2013ರಲ್ಲಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಹಾಗೂ ₹55 ಸಾವಿರ ದಂಡಕ್ಕೆ ಗುರಿಯಾಗಿದ್ದ. 2021ರಲ್ಲಿ ಪೆರೋಲ್ ಮೇಲೆ ಹೊರಬಂದು ನಾಪತ್ತೆಯಾಗಿದ್ದ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಪಿಐ ಸುಂದರೇಶ್ ಹೊಳೆಣ್ಣವರ್ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ಅವರು ಗುರುವಾರ ಠಾಣೆಗೆ ಭೇಟಿ ನೀಡಿ ಅಭಿನಂದಿಸಿದರು.
ಪೊಲೀಸ್ ಉಪಾಧೀಕ್ಷಕ ವೆಂಕಟೇಶ, ಪಿಎಸ್‌ಐ ಶ್ರೀನಿವಾಸ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.