ಕುರುಗೋಡು: ಬೀದಿನಾಯಿಗಳ ಹಿಂಡು ಕುರಿ ಹಟ್ಟಿ ಮೇಲೆ ದಾಳಿ ನಡೆಸಿದ ಪರಿಣಾಮ 23 ಟಗರು ಮರಿಗಳು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಎಂ.ಸೂಗೂರು ಗ್ರಾಮದಲ್ಲಿ ಬುಧವಾರ ಜರುಗಿದೆ.
ಎಂ.ಸೂಗೂರು ಗ್ರಾಮದ ಸಣ್ಣ ಪಕ್ಕೀರಪ್ಪ ಮತ್ತು ದೊಡ್ಡಪಕ್ಕೀರಪ್ಪ ಅವರು 37 ಟಗರು ಮರಿಗಳನ್ನು ಗ್ರಾಮದ ಹೊರವಲಯದ ಹಟ್ಟಿಯಲ್ಲಿ ಕೂಡಿ ಹಾಕಿದ್ದರು.
ಪಶುವೈದ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲಿಸಿದರು.
ಘಟನೆಯಿಂದ ₹1.84 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.