ADVERTISEMENT

ಪಿಡಿಐಟಿ ಅಧ್ಯಕ್ಷರಾಗಿ ಪಲ್ಲೇದ ದೊಡ್ಡಪ್ಪ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 15:58 IST
Last Updated 8 ಜುಲೈ 2021, 15:58 IST
ಹೊಸಪೇಟೆ ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಪಲ್ಲೇದ ದೊಡ್ಡಪ್ಪ ಅವರನ್ನು ಕಾಲೇಜಿನ ಸಿಬ್ಬಂದಿ ಸತ್ಕರಿಸಿದರು
ಹೊಸಪೇಟೆ ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಪಲ್ಲೇದ ದೊಡ್ಡಪ್ಪ ಅವರನ್ನು ಕಾಲೇಜಿನ ಸಿಬ್ಬಂದಿ ಸತ್ಕರಿಸಿದರು   

ಹೊಸಪೇಟೆ (ವಿಜಯನಗರ): ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ (ಪಿಡಿಐಟಿ) ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಪಲ್ಲೇದ ದೊಡ್ಡಪ್ಪ ಗುರುವಾರ ಅಧಿಕಾರ ಸ್ವೀಕರಿಸಿದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೋರಿ ವಿರೂಪಾಕ್ಷಪ್ಪ, ಶರಣ ಸ್ವಾಮಿ, ರಾಜಶೇಖರ ಮುಲಾಲಿ, ಕೋರಿಶೆಟ್ರ ಲಿಂಗಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ಪ್ರಾಚಾರ್ಯ ಎಸ್.ಎಂ. ಶಶಿಧರ, ಪ್ರಾಧ್ಯಾಪಕಿ ಶರಣಬಸಮ್ಮ, ರವಿ ಕುಮಾರ್ ಅವರು ಪಲ್ಲೇದ ದೊಡ್ಡಪ್ಪ ಅವರನ್ನು ಸತ್ಕರಿಸಿ ಶುಭ ಕೋರಿದರು.

ಲಸಿಕೆ:ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಜನರು ಗುರುವಾರ ಲಸಿಕೆ ಪಡೆದರು. ಕಾಲೇಜಿನ ಕೋರಿಕೆಯ ಮೇರೆಗೆ ಆರೋಗ್ಯ ಇಲಾಖೆಯು ಲಸಿಕೆಗೆ ವ್ಯವಸ್ಥೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.