ಸಿರುಗುಪ್ಪ: ಭತ್ತದ ನಾಡಲ್ಲಿ ಹೆಚ್ಚಾಗುತ್ತಿ ರುವ ಭಿಕ್ಷಾಟನೆಯು ಸಿರುಗುಪ್ಪ ನಗರಕ್ಕೆ ಕಪ್ಪುಚುಕ್ಕೆಯಂತೆ ಪರಿಣಮಿಸಿದೆ.
ಅಖಂಡ ಬಳ್ಳಾರಿ ಜಿಲ್ಲೆ ವಿಭಾಗ ನಂತರ ಜಿಲ್ಲೆಯಲ್ಲಿ ಅತಿ ದೊಡ್ಡ ತಾಲ್ಲೂಕಾಗಿ ಬೆಳೆಯುತ್ತಿರುವ ನಗರದ ವಿವಿಧ ಕಡೆಯಲ್ಲಿ ಭಿಕ್ಷಾಟನೆ ನಿರಂತರ ವಾಗಿ ಕಾಣಸಿಕೊಳ್ಳುತ್ತಿದ್ದಾರೆ. ಸ್ಥಳೀಯ ರೊಂದಿಗೆ ಹೆಚ್ಚಿನ ಮಂದಿ ಹೊರ ರಾಜ್ಯ, ಹೊರ ಜಿಲ್ಲೆಯವರು ಇದ್ದಾರೆ.
ನಗರದಲ್ಲಿ ವಸ್ತುಗಳ ಮಾರಾಟದ ಹೆಸರಿನಲ್ಲಿಯೂ ಭಿಕ್ಷಾಟನೆ ಹೆಚ್ಚುತ್ತಿದೆ, ಅದರಲ್ಲೂ ಶಾಲೆಗಳಲ್ಲಿ ಕಲಿಯ ಬೇಕಾದ ವಿದ್ಯಾರ್ಥಿಗಳು ಕೂಡ, ವಯೋ ವೃದ್ದರು, ಕಂಕುಳಲ್ಲಿ ಮಗು ಹಿಡಿದು ಇದರಲ್ಲಿ ತೊಡಗಿಕೊಂಡಿದ್ದಾರೆ. ಶಿಕ್ಷಣ, ಕಾರ್ಮಿಕ, ಮಹಿಳಾ ಮಕ್ಕಳ ಅಭಿವೃದ್ದಿ, ಪೊಲೀಸ್ ಇಲಾಖೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳೂ ಈ ವಿಚಾರದಲ್ಲಿ ಇನ್ನೂ ಮೌನವಾಗಿರುವುದು ಅವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ನಗರದ ಬಸ್ ನಿಲ್ದಾಣ, ತಾಲ್ಲೂಕು ಮೈದಾನ, ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್, ದೇವಸ್ಥಾನಗಳ ಮುಂದೆ ಮಕ್ಕಳೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ, ಯುವಕರು, ಹಿರಿಯ ಮಹಿಳೆಯರು, ಪುರುಷರು ಭಿಕ್ಷೆ ಬೇಡುತ್ತಿದ್ದಾರೆ. ಪುರುಷರು ಅಸಹ್ಯವಾಗಿ ಅರೆಬರೆ ಬಟ್ಟೆಗಳನ್ನು ತೊಟ್ಟು, ಮದ್ಯ ಸೇವಿಸಿ ಭಿಕ್ಷೆ ಬೇಡುವುದನ್ನು ಕಂಡು ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನೊಂದು ಕಡೆ ರಸ್ತೆ ಮಧ್ಯದಲ್ಲಿ ವಾಹನಗಳನ್ನು ತಡೆದು ಭಿಕ್ಷಾಟನೆ ಮಾಡುತ್ತಿದ್ದಾರೆ.
ಮಧ್ಯಪಾನ ಸೇವಿಸಿ ಭಿಕ್ಷೆ ಬೇಡುತ್ತಿ ರುವವರು ಹಣ ನೀಡಲು ನಿರಾಕರಿಸಿದ ವೇಳೆ ಅವರ ಜತೆ ಅನುಚಿತ ವರ್ತನೆ ನಡೆಸುತ್ತಿರುವುದು ಸಾರ್ವಜನಿಕರ ಬೇಸತ್ತಿದ್ದಾರೆ. ಅನಾಥಾಶ್ರಮದ ಪೋಟೋ ಹಿಡಿದರು, ಮಕ್ಕಳ ಅನಾರೋಗ್ಯದ ಪೋಟೋ ಹಿಡಿದು, ಅಂಗವೈಕಲ್ಯ ತೋರಿಸಿತ್ತಾ, ಮಕ್ಕಳ ಮದುವೇ ಇತರೆ ಹೆಸರಿನಲ್ಲಿ ಭಿಕ್ಷಾಟನೆ ನಡೆಯುತ್ತಿದೆ. ಭಿಕ್ಷಾಟನೆ ಸಮಯದಲ್ಲಿ ವ್ಯಕ್ತಿಗಳ ಸಹಚಾರಗಳನ್ನು ಗುರಿಸಿಕೊಂಡು ಅನೇಕ ಬಾರಿ ದರೋಡೆಗಳು ಈ ಹಿಂದೆ ನಡೆದಿವೆ.
‘ಭಿಕ್ಷಾಟನೆ ನಿಷೇಧ ಕಾಯ್ದೆ ಪ್ರಕಾರ ಮಕ್ಕಳು ಅಥವಾ ಹಿರಿಯರು ಯಾರೇ ಆದರೂ ಮಾಡುವುದು ತಪ್ಪು. ಭಿಕ್ಷಾಟನೆ ವೃತ್ತಿಯಲ್ಲಿ ತೊಡಗದಂತೆ ಹಾಗೂ ಗೌರವಯುತ ಬದುಕು ನಡೆಸುವಂತೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಆದೇಶ ನೀಡಿವೆ’ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.