ADVERTISEMENT

ಎರಡೇ ದಿನದಲ್ಲಿ ಕಳವು ಪ್ರಕರಣ ಬೇಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 16:06 IST
Last Updated 18 ಜುಲೈ 2021, 16:06 IST
ಮನೆ ಕಳವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ಅವರಿಂದ ಒಡವೆಗಳನ್ನು ವಶಪಡಿಸಿಕೊಂಡಿರುವ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು
ಮನೆ ಕಳವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ, ಅವರಿಂದ ಒಡವೆಗಳನ್ನು ವಶಪಡಿಸಿಕೊಂಡಿರುವ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು   

ಹೊಸಪೇಟೆ (ವಿಜಯನಗರ): ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಎರಡೇ ದಿನಗಳಲ್ಲಿ ಮನೆ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೌಲ್‌ಪೇಟೆಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಇಬ್ಬರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ಅಗಸರ ಓಣಿಯ ಆನಂದ ಪರಸಪ್ಪ (28), ಚಪ್ಪರದಹಳ್ಳಿಯ ಗೋವಿಂದ ಹೊನ್ನೂರಪ್ಪ (33) ನ್ಯಾಯಾಂಗ ಬಂಧನಕ್ಕೆ ಒಳಗಾದವರು. ಆರೋಪಿಗಳಿಂದ ₹28,000 ಮೌಲ್ಯದ ಬೆಳ್ಳಿ ಕಡಗ, ಚೈನು ಹಾಗೂ ಕೃತ್ಯಕ್ಕೆ ಬಳಸಿದ ರಾಡ್‌ ವಶಪಡಿಸಿಕೊಂಡಿದ್ದಾರೆ.

ADVERTISEMENT

ಘಟನೆ ಹಿನ್ನೆಲೆ:

ಜು. 16ರಂದು ನಸುಕಿನ ಜಾವ ಕೌಲ್‌ಪೇಟೆಯ ಮಟನ್‌ ಮಾರುಕಟ್ಟೆಯಲ್ಲಿನ ದಾದಾ ಕಲಂದರ್‌ ಅವರ ಮನೆಯ ಬೀಗ ಮುರಿದು ಕಳವು ಮಾಡಿದ್ದರು. ಈ ಕುರಿತು ಜು. 17ರಂದು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ ವಿ. ರಘುಕುಮಾರ, ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಶ್ರೀನಿವಾಸ್‌ ರಾವ್‌, ಎಎಸ್‌ಐ ಕೋದಂಡಪಾಣಿ, ಕಾನ್‌ಸ್ಟೆಬಲ್‌ಗಳಾದ ಕೆ. ಶ್ರೀನಿವಾಸ, ಸಣ್ಣ ಗಾಳೆಪ್ಪ, ನಿಂಗರಾಜ್‌, ಅಡಿವೆಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.