ADVERTISEMENT

ನಗರಸಭೆಯಿಂದ ಫಾಗಿಂಗ್‌ ಶುರು

‘ಪ್ರಜಾವಾಣಿ’ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 14:02 IST
Last Updated 14 ಸೆಪ್ಟೆಂಬರ್ 2019, 14:02 IST
ಹೊಸಪೇಟೆಯ ಪಟೇಲ್‌ ನಗರದಲ್ಲಿ ಶನಿವಾರ ಸಂಜೆ ನಗರಸಭೆ ಸಿಬ್ಬಂದಿ ಫಾಗಿಂಗ್‌ ಮಾಡುತ್ತಿರುವಾಗ ಚಿಣ್ಣರು ಅದನ್ನು ನೋಡಿ ಸಂಭ್ರಮಿಸಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಪಟೇಲ್‌ ನಗರದಲ್ಲಿ ಶನಿವಾರ ಸಂಜೆ ನಗರಸಭೆ ಸಿಬ್ಬಂದಿ ಫಾಗಿಂಗ್‌ ಮಾಡುತ್ತಿರುವಾಗ ಚಿಣ್ಣರು ಅದನ್ನು ನೋಡಿ ಸಂಭ್ರಮಿಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಕೊನೆಗೂ ಎಚ್ಚೆತ್ತುಕೊಂಡಿರುವ ನಗರಸಭೆ ಶನಿವಾರದಿಂದ ನಗರದಾದ್ಯಂತ ‘ಫಾಗಿಂಗ್‌’ ಕೆಲಸ ಆರಂಭಿಸಿದೆ.

‘ಫಾಗಿಂಗ್‌’ ಮರೆತ ನಗರಸಭೆ! ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ ಸೆ. 12ರಂದು ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು. ನಗರದಲ್ಲಿ ಕೆಲವೆಡೆ ತೆರೆದ ಚರಂಡಿಗಳು, ಅಪೂರ್ಣ ಕಾಮಗಾರಿಯಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಿಂದ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿ ಬೆಳಕು ಚೆಲ್ಲಿತ್ತು.

ವರದಿಗೆ ಕಣ್ಣು ತೆರೆದಿರುವ ನಗರಸಭೆ, ನಗರದ ಎಲ್ಲ ಬಡಾವಣೆಗಳಲ್ಲಿ ಫಾಗಿಂಗ್‌ ಮಾಡಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.