ADVERTISEMENT

ಪ್ರಜಾವಾಣಿ ಸಾಧಕರು: ಎರಡು ಕೈಗಳಿಲ್ಲದಿದ್ದರೂ ‘ರಾಯಭಾರಿ’ ಲಕ್ಷ್ಮೀ ದೇವಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 10:27 IST
Last Updated 1 ಜನವರಿ 2022, 10:27 IST
ಲಕ್ಷ್ಮೀದೇವಿ
ಲಕ್ಷ್ಮೀದೇವಿ   

ಕೂಡ್ಲಿಗಿ(ವಿಜಯನಗರ ಜಿಲ್ಲೆ): ಎರಡು ಕೈಗಳು ಇಲ್ಲದಿದ್ದರೂ ಮತ್ತೊಬ್ಬರನ್ನು ಅವಲಂಬಿಸದೆ ತನ್ನೆಲ್ಲ ಕೆಲಸ ತಾನೇ ಮಾಡಿಕೊಳ್ಳುವ ಮೂಲಕ ತಾಲ್ಲೂಕಿನ ಗುಂಡುಮುಣುಗು ಗ್ರಾಮದ ನಿವಾಸಿ ಲಕ್ಷ್ಮೀದೇವಿ ಮಾದರಿಯಾಗಿದ್ದಾರೆ.

ನಾಗೇಂದ್ರಪ್ಪ ಹಾಗೂ ಓಬಮ್ಮ ದಂಪತಿಯ ಎರಡನೇ ಮಗಳಾದ ಲಕ್ಷ್ಮೀದೇವಿಗೆ ಹುಟ್ಟಿನಿಂದಲೇ ಎರಡೂ ಕೈಗಳಿಲ್ಲ. ಆದರೂ ಛಲ ಬಿಡದೆ ಉನ್ನತ ಶಿಕ್ಷಣ ಪಡೆದು, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಅವಧಿ ಮುಗಿದ ನಂತರವೂ ಸ್ವಯಂ ಶಿಕ್ಷಕಿಯಾಗಿ ಶಾಲೆಯಲ್ಲಿ ಪ್ರತಿ ದಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ. ತಮ್ಮ ಕಾಲಿನಿಂದಲೇ ಹಾಳೆಯಲ್ಲಿ ಹಾಗೂ ಕಪ್ಪು ಹಲಗೆ ಮೇಲೆ ಸುಂದರವಾಗಿ ಅಕ್ಷರಗಳನ್ನು ಬರೆಯುತ್ತಾರೆ.

ಪ್ರತಿ ಚುನಾವಣೆಯಲ್ಲಿ ಯಾರ ಸಹಾಯವಿಲ್ಲದೆ ಅವರೇ ಮತಗಟ್ಟೆಗೆ ಹೋಗಿ ಮತದಾನ ಮಾಡುತ್ತಾರೆ. ಚುನಾವಣಾ ಆಯೋಗ ಇವರನ್ನು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಯಭಾರಿಯಾಗಿ ನೇಮಕ ಮಾಡಿಕೊಂಡಿತ್ತು. ಕಾಲಿಂದಲೇ ರಂಗೋಲಿ ಹಾಕುತ್ತಾರೆ. ಈಳಿಗಿಯಿಂದ ತರಕಾರಿ ಹೆಚ್ಚುವುದು ಸೇರಿದಂತೆ ಇತರೆ ಕೆಲಸ ಮಾಡುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.