ADVERTISEMENT

ಬಳ್ಳಾರಿ | ಕಾವೇರಿ ತಂತ್ರಾಂಶ ಬದಲಾವಣೆ: ಆಸ್ತಿ ನೋಂದಣಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 6:18 IST
Last Updated 1 ಸೆಪ್ಟೆಂಬರ್ 2025, 6:18 IST
<div class="paragraphs"><p>&nbsp;ಸಾಂದರ್ಭಿಕ ಚಿತ್ರ</p></div>

 ಸಾಂದರ್ಭಿಕ ಚಿತ್ರ

   

ಬಳ್ಳಾರಿ: ಆಸ್ತಿ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಹೆಚ್ಚಿಸಿರುವ ಕಂದಾಯ ಇಲಾಖೆ, ಆ.31ರಿಂದ ಜಾರಿಗೆ ತರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ‘ಕಾವೇರಿ’ ತಂತ್ರಾಂಶದಲ್ಲಿ ಬದಲಾವಣೆಗಳು ಆಗುತ್ತಿದ್ದು, ನೋಂದಣಿ ಪ್ರಕ್ರಿಯೆ ರಾಜ್ಯದಾದ್ಯಂತ ಶನಿವಾರ ಸ್ಥಗಿತಗೊಂಡಿದೆ.

ಆಸ್ತಿ ನೋಂದಣಿ ಶುಲ್ಕ ಹೆಚ್ಚಿಸಿ ಸರ್ಕಾರ ಆ.29ರಂದು ಅಧಿಸೂಚನೆ ಹೊರಡಿಸಿದೆ.  

ADVERTISEMENT

ನೋಂದಣಿ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದ ನಾಗರಿಕರು ಜಿಲ್ಲೆಯ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಬಂದರಾದರೂ, ಕೆಲಸವಾಗದೇ ಹಿಂದಿರುಗಿದರು. ಸದಾ ಗಿಜಿಗುಡುತ್ತಿದ್ದ ಕಚೇರಿಗಳ ಆವರಣ ಶನಿವಾರ ಬಣಗುಡುತ್ತಿತ್ತು. ಕಚೇರಿ ಸಿಬ್ಬಂದಿ ಇತರ ಕೆಲಸಗಳಲ್ಲಿ ಮಗ್ನರಾಗಿದ್ದರು. ದಸ್ತಾವೇಜು ಬರಹಗಾರರೂ ನಾಗರಿಕರಿಗೆ ಇದೇ ವಿಷಯ ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದರು. 

ಬಳ್ಳಾರಿ ನಗರದ ಉಪ ನೋಂದಣಾಧಿಕಾರಿ ಕಚೇರಿಯೊಂದರಲ್ಲೇ ನಿತ್ಯ 100ಕ್ಕೂ ಹೆಚ್ಚು ಆಸ್ತಿಗಳ ನೋಂದಣಿ ಆಗುತ್ತಿತ್ತು. ‘ಕಾವೇರಿ’ ತಂತ್ರಾಂಶದಲ್ಲಿ ಬದಲಾವಣೆ ಪೂರ್ಣಗೊಳ್ಳುತ್ತಲೇ ನೋಂದಣಿ ಆರಂಭವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ. ಬಹುತೇಕ ಭಾನುವಾರದಿಂದ ನೋಂದಣಿ ನಡೆಯಲಿದೆ ಎಂದು ಗೊತ್ತಾಗಿದೆ. 

ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಳ್ಳಾರಿ ಉಪ ನೋಂದಣಾಧಿಕಾರಿ ಎಂ.ಎ ಮಾಬುನ್ನಿಸ್ಸಾ ಬೇಗಂ, ‘ಕಾವೇರಿ ತಂತ್ರಾಂಶ ಅಪ್ಡೇಟ್‌ ಕಾರಣಕ್ಕೆ ನೋಂದಣಿ ಶನಿವಾರ  ಸ್ಥಗಿತಗೊಂಡಿದೆ. ಬಹುತೇಕ ಶನಿವಾರ ರಾತ್ರಿ ಹೊತ್ತಿಗೆ ಅಪ್ಡೇಟ್‌ ಪೂರ್ಣಗೊಳ್ಳಲಿದ್ದು, ಭಾನುವಾರ ನೋಂದಣಿ ಆರಂಭವಾಗಲಿದೆ. ನೋಂದಣಿ ಸ್ಥಗಿತಗೊಂಡಿರುವುದರಿಂದ ಸರ್ಕಾರಕ್ಕೆ ನಷ್ಟವೇನೂ ಇಲ್ಲ. ಸಾಫ್ಟ್‌ವೇರ್‌ ಅಪ್ಡೇಟ್‌ ಆದಕೂಡಲೇ ನೋಂದಣಿ ಆರಂಭವಾಗಲಿದ್ದು, ಹೊಸ ಶುಲ್ಕ ಸಂಗ್ರಹವಾಗಲಿದೆ. ಕಂದಾಯ ಸಂಗ್ರಹಣೆಯೂ ಹೆಚ್ಚಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.