ADVERTISEMENT

ಹೊಸಪೇಟೆ | ಪೌರತ್ವ ಕಾಯ್ದೆ: ಬಿಜೆಪಿ ಕಾರ್ಯಕರ್ತರಿಗೆ ಪ್ರವೇಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 7:23 IST
Last Updated 6 ಜನವರಿ 2020, 7:23 IST
ಹೊಸಪೇಟೆಯ ಚಲವಾದಿ ಕೇರಿಯಿಂದ ಹೊರ ನಡೆದ ಬಿಜೆಪಿ ಕಾರ್ಯಕರ್ತರು
ಹೊಸಪೇಟೆಯ ಚಲವಾದಿ ಕೇರಿಯಿಂದ ಹೊರ ನಡೆದ ಬಿಜೆಪಿ ಕಾರ್ಯಕರ್ತರು   

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಲು ಮುಂದಾಗಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಸೋಮವಾರ ಇಲ್ಲಿನ ಚಲವಾದಿಕೇರಿ ನಿವಾಸಿಗಳು ತಡೆದು, ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಬಿಜೆಪಿ ಕಾರ್ಯಕರ್ತರು ಬರುವ ವಿಷಯ ಗೊತ್ತಾಗುತ್ತಿದ್ದಂತೆ ಓಣಿಯ ಪ್ರವೇಶ ದ್ವಾರ ಬಳಿ ಸೇರಿದ ಸ್ಥಳೀಯ ನಿವಾಸಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಗೋ ಬ್ಯಾಕ್, ಗೋ ಬ್ಯಾಕ್ ಎಂದು ಘೋಷಣೆಗಳನ್ನು ಕೂಗಿದರು.

‘ನಾವು ಕರಪತ್ರಗಳನ್ನು ಕೊಟ್ಟು ಹೋಗಲು ಬಂದಿದ್ದೇವೆ. ಅದಕ್ಕೆ ಅವಕಾಶ ಕಲ್ಪಿಸಬೇಕು’ಎಂದು ಬಿಜೆಪಿ ಮುಖಂಡರು ಹೇಳಿದರು. ‘ನೀವು ಇಲ್ಲಿಗೆ ಬರುವುದೇ ಬೇಡ. ಬೇರೆಡೆ ಹೋಗಿ ಜನಜಾಗೃತಿ ನಡೆಸಿ’ ಸ್ಥಳೀಯರು ಕಟುವಾಗಿ ನುಡಿದರು.

ADVERTISEMENT

ಎರಡೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರುವಾತಾವರಣ ತಿಳಿಗೊಳಿಸಲು ಯತ್ನಿಸಿದರು.

ಓಣಿ ನಿವಾಸಿಗಳು ಆಜಾದಿ, ಆಜಾದಿ, ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆಗಳನ್ನು ಮೊಳಗಿಸಿದರು.ಸ್ಥಳೀಯರು ಪಟ್ಟು ಬಿಡದ ಕಾರಣ ಬಿಜೆಪಿ ಮುಖಂಡರು ಸ್ಥಳದಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.