ಕೊಟ್ಟೂರು: ‘ಪುರಾಣ ಶ್ರವಣದಿಂದ ಸಂಸ್ಕಾರವಂತರಾಗಲು ಸಾಧ್ಯ’ ಎಂದು ಉಜ್ಜಯಿನಿ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.
ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಮಹಾಕಾಳಿಕಾಂಬ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ 46ನೇ ವರ್ಷದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಕ್ಕಳನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ, ಸಂಸ್ಕಾರವಂತರನ್ನಾಗಿ ಮಾಡುವ ಹೊಣೆ ಹೆತ್ತವರದ್ದಾಗಿದೆ. ದಯೆ, ದಾನ, ಧರ್ಮ, ಮಾನವೀಯತೆಯಿಂದ ಸಾರ್ಥಕ್ಯ ಗಳಿಸಬಹುದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚೌಡಪ್ಪ, ಕುರುಗೋಡು ಸಿದ್ದಣ್ಣ, ಪೊಲೀಸ್ ರೇವಣ್ಣ, ಕೊಟ್ರೇಶ್ ಆಚಾರ್, ವೀರೇಶ್ ಆಚಾರ್, ರವೀಂದ್ರ ಆಚಾರ್, ಸಿದ್ದೇಶ ಶರ್ಮ, ಮರುಳಸಿದ್ಧಚಾರಿ, ಸಿದ್ಧಲಿಂಗಯ್ಯ, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.