ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಅಲ್ಲಲ್ಲಿ ಸಾಧಾರಣವಾಗಿ ಬಿದ್ದಿತ್ತು. ಆದರೆ ಬುಧವಾರ ರಾತ್ರಿ ಗುಡುಗು ಸಹಿತವಾಗಿ ಅನೇಕ ಕಡೆ ಬಾರಿ ಮಳೆಯಾಗಿದೆ.
ಮಳೆಯಿಂದ ತಾಲ್ಲೂಕಿನ ಹೊಸಹಳ್ಳಿ ಹೋಬಳಿಯಲ್ಲಿ 4, ಗುಡೇಕೋಟೆ ಹೋಬಳಿಯಲ್ಲಿ 4 ಸೇರಿದಂತೆ ಒಟ್ಟು 8ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಹಶೀಲ್ದಾರ್ ಎಂ. ರೇಣುಕಾ ತಿಳಿಸಿದ್ದಾರೆ.
ಕೂಡ್ಲಿಗಿ-21.3 ಮಿಮೀ, ಗುಡೇಕೋಟೆ-33.2 ಮಿಮೀ, ಮಳೆಯಾಗಿದೆ. ಇದರಿಂದ ಅಲ್ಲಲ್ಲಿ ಹಳ್ಳಗಳು ತುಂಬಿ ಹರಿದಿದ್ದು, ಸಣ್ಣ ಕಟ್ಟೆಗಳಿಗೆ ನೀರು ಹರಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.