ADVERTISEMENT

ಸಿರುಗುಪ್ಪ | ಗುಡುಗು ಸಿಡಿಲು ಸಹಿತ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:30 IST
Last Updated 13 ಮೇ 2025, 14:30 IST
ಸಿರುಗುಪ್ಪ ನಗರದಲ್ಲಿ ಮಂಗಳವಾರ ಮಳೆ ಸುರಿಯಿತು
ಸಿರುಗುಪ್ಪ ನಗರದಲ್ಲಿ ಮಂಗಳವಾರ ಮಳೆ ಸುರಿಯಿತು   

ಸಿರುಗುಪ್ಪ : ತಾಲ್ಲೂಕಿನ  ಗ್ರಾಮೀಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯಿತು.

ನಗರ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಗ್ಗು ದಿನ್ನೆಗಳಲಿ ಮಳೆ ನೀರು ನಿಂತಿದ್ದು, ರಸ್ತೆ ಹುಡುಕಿಕೊಂಡು ವಾಹನ ಚಾಲನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಶಿವಶಕ್ತಿ ಭವನದ ಮುಂದಿನ ರಾಷ್ಟ್ರೀಯ ಹೆದ್ದಾರಿಗೆ ಮಳೆಯ ನೀರು ಮತ್ತು ಚರಂಡಿಯ ನೀರು ರಸ್ತೆಯ ಮೇಲೆ ಹರಿದು ರಸ್ತೆ ದಾಟಲು ವಾಹನಗಳು ಹರಸಾಹಸ ಪಡುವಂತಾಯಿತು.

ADVERTISEMENT

ಉಪನೋಂದಣಿ ಇಲಾಖೆಯ ಆವರಣದಲ್ಲಿ ಪತ್ರಬರಹಗಾರರು ಕೂರುವ ಸ್ಥಳವು ಸಂಪೂರ್ಣ ಮಳೆ ನೀರಿನಿಂದ ಆವೃತವಾಗಿದೆ. ಕೃಷಿ ಇಲಾಖೆಯ ಆವರಣದಲ್ಲಿ ಕಚೇರಿಗೆ ಹೋಗಲು ದಾರಿ ಇಲ್ಲದೆ ನೀರು ತುಂಬಿದೆ.

ಟ್ರೆಂಡ್ಸ್‌ ಬಟ್ಟೆ ಅಂಗಡಿ , ಗ್ರಾಮೀಣ ಬ್ಯಾಂಕ್‌ ಮುಂದಿನ ಹೆದ್ದಾರಿಯ ಪಕ್ಕದ ಚರಂಡಿಯು ಮಳೆಯ ನೀರಿನಿಂದ ತುಂಬಿ ರಸ್ತೆಗೆ ಹರಿದು ರಸ್ತೆಯಲ್ಲ ಜಲಾವೃತವಾಗಿತ್ತು.

ಹಚ್ಚೊಳ್ಳಿ ಹೋಬಳಿ ವ್ಯಾಪ್ತಿಯ ಗುಬ್ಬಿಹಾಳ್‌ ಗ್ರಾಮದ ಸುತ್ತಮುತ್ತ ಜಮೀನನ ಒಡ್ಡುಗಳು ಮಳೆಯ ನೀರಿನ ರಭಸಕ್ಕೆ ಹೊಡೆದು ಹೋಗಿವೆ.

ತಾಲ್ಲೂಕಿನ ರಾವಿಹಾಳ ಗ್ರಾಮದ ಪಕ್ಕದ ಕೆಮ್ಮನ ಹಳ್ಳವು ತುಂಬಿ ಹರಿದ ಪರಿಣಾಮವಾಗಿ ಜಮೀನುಗಳಲ್ಲಿ ಮಳೆ ನೀರು ನಿಂತಿತು,

ಸಿರುಗುಪ್ಪ ನಗರದ ಉಪನೋಂದಣಿ ಇಲಾಖೆಯ ಆವರಣದಲ್ಲಿ ಪತ್ರಬರಹಗಾರರು ಕೂರುವ ಸ್ಥಳವು ಸಂಪೂರ್ಣ ಮಳೆ ನೀರಿನಿಂದ ಆವೃತವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.