ADVERTISEMENT

ಹೊಸಪೇಟೆ ನಗರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 8:10 IST
Last Updated 1 ಜೂನ್ 2020, 8:10 IST
ಹೊಸಪೇಟೆ ಸುತ್ತಮುತ್ತಲ ಪ್ರೇದೇಶದಲ್ಲಿ ಜಿಟಿಜಿಟಿ ಮಳೆ
ಹೊಸಪೇಟೆ ಸುತ್ತಮುತ್ತಲ ಪ್ರೇದೇಶದಲ್ಲಿ ಜಿಟಿಜಿಟಿ ಮಳೆ   

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಅರ್ಧಗಂಟೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಸೂರ್ಯ ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಮಧ್ಯಾಹ್ನ ಹನ್ನೆರಡು ಗಂಟೆಗೆ ಕಾರ್ಮೋಡ ಕವಿದು ಮಳೆ ಬೀಳಲು ಆರಂಭಿಸಿತು.

ಜಿಟಿಜಿಟಿ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಭಾನುವಾರ ಕೂಡ ಉತ್ತಮ ಮಳೆಯಾಗಿತ್ತು. ಎರಡು ದಿನಗಳಿಂದ ವರ್ಷಧಾರೆ ಆಗುತ್ತಿರುವ ಕಾರಣ ಪ್ರಖರ ಬಿಸಿಲಿನಿಂದ ಜನರಿಗೆ ಮುಕ್ತಿ ಸಿಕ್ಕಂತಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.